ಬೆಂಗಳೂರು ಗಲಭೆ ಕೇಸ್: ಅಮಾಯಕರಿಗೆ ತೊಂದರೆಯಾಗದಿರಲಿ-ಅಖಂಡ ಶ್ರೀನಿವಾಸ ಮೂರ್ತಿ ಮನವಿ

ಬೆಂಗಳೂರು, ಆಗಸ್ಟ್, 21, 2020 (www.justkannada.in): ಡಿ.ಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರಿಗೆ ತೊಂದರೆಯಾಗುವುದು ಬೇಡ. ನಿರಪರಾಧಿಗಳಿಗೆ ಶಿಕ್ಷೆಯಾಗುವುದು ಬೇಡ. ವಿಡಿಯೋದಲ್ಲಿ ಇದ್ದವರಿಗೆ ಶಿಕ್ಷೆ ಕೊಡಿ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನವಿ ಮಾಡಿದರು. bengaluru-riots-bother-innocent-people- appeal-intact-srinivasa murthy

ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ,  ಅಮಾಯಕರಿಗೆ ಶಿಕ್ಷೆಯಾಗದಂತೆ ಮನವಿ ಮಾಡಿದ್ದಾರೆ.

ಪೊಲೀಸ್ ಇಲಾಖೆ ಮೇಲೆ ನಂಬಿಕೆಯಿದ್ದು, ಗಲಭೆ ಸಂಬಂಧಿಸಿದಂತೆ ಕ್ಷೇತ್ರದ ಜನರಿಗೆ ತೊಂದರೆಯಾಗುವುದು ಬೇಡ. ಶಾಸಕನಾಗಿ ಪೊಲೀಸ್ ಠಾಣೆಗೆ ಬಂದಿದ್ದೇನೆ. ಸುಟ್ಟಿರುವುದು ನನ್ನ ಮನೆ ಹೀಗಾಗಿ  ತಪ್ಪಿತಸ್ಥರಿಗಷ್ಟೇ ಶಿಕ್ಷೆಯಾಗಲಿ. ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅಮಾಯಕರಿಗೆ ತೊಂದರೆಯಾಗುವುದು ಬೇಡ ಎಂದು ವಿನಂತಿಸಿದರು.

Key words : bengaluru-riots-bother-innocent-people- appeal-intact-srinivasa murthy