ಬೆಂಗಳೂರು, ಮೇ ೨೬,೨೦೨೫: ನಗರ ದಕ್ಷಿಣ ವಲಯದ ಹೊರ ಪ್ರದೇಶದ ಫಾರ್ಮ್‌ಹೌಸ್‌ನಲ್ಲಿ ಆಯೋಜಿತವಾಗಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಪೊಲೀಸರು ೩೧ ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಾಳಿ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ 3 ಗ್ರಾಂ ಕೋಕೆನ್, 5 ಗ್ರಾಂ ಹೈಡ್ರೋ ಗಾಂಜಾ, 60 ಗ್ರಾಂ ಹಾಶಿಷ್ ಮತ್ತು ಸ್ವಲ್ಪ ಪ್ರಮಾಣದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಈ ಪಾರ್ಟಿಯನ್ನು ಖಾಸಗಿ ಸಂಸ್ಥೆಯಲ್ಲಿ ವ್ಯವಸ್ಥಪಾಕನಾಗಿ ಕೆಲಸ ನಿರ್ವಹಿಸುತ್ತಿದ್ದ ಶರೀಫ್ ಅವರ 26ನೇ ಹುಟ್ಟುಹಬ್ಬ ಆಚರಿಸಲು ಆಯೋಜಿಸಲಾಗಿತ್ತು,
ಶರೀಫ್ ಈ ಫಾರ್ಮ್ ಹೌಸ್ ಅನ್ನು ಆನ್‌ಲೈನ್ ಮೂಲಕ ಬುಕ್ ಮಾಡಿ ಅಸಾದ್ ಎಂಬಾತನಿಂದ ಬಾಡಿಗೆಗೆ ಪಡೆದಿದ್ದರು. ಈ ಪಾರ್ಟಿಗೆ ಹಾಜರಾದವರು ಶರೀಫ್ ಅವರ ಸ್ನೇಹಿತರು, ಸುಮಾರು 24 ರಿಂದ 30 ವರ್ಷ ವಯಸ್ಸಿನವರು. ಈ ಪಾರ್ಟಿ ಶನಿವಾರದಂದು ಪ್ರಾರಂಭವಾಯಿತು. ಪೋಲಿಸರು ಬೆಳಿಗಿನ ಜಾವ 5 ಗಂಟೆಗೆ ಡಿಸಿಪಿ (ಉತ್ತರ) ಸಜಿತ್ ಅವರ ಮೇಲ್ವಿಚಾರಣೆಯಡಿಯಲ್ಲಿ ದಾಳಿ ನಡೆಸಿದರು.
ಬಂಧಿತ 31 ಜನರ ರಕ್ತದ ನಮೂನೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಾದಕ ಔಷಧಿ ಮತ್ತು ಮನೋಶ್ರೇಣಿಗಳ ಕಾನೂನಿನ ಅಡಿ (Narcotic Drugs and Psychotropic Substances Act) ಪ್ರಕರಣ ದಾಖಲಾಗಿದೆ.
key words: Bengaluru rave party, FIR lodged, against 31
SUMMARY:
Bengaluru rave party: FIR lodged against 31 people. Police have registered a case against 31 people for a raid on a rave party organized at a farmhouse in the outskirts of the South City Zone, Bengaluru. During the raid, 3 grams of cocaine, 5 grams of hydro ganja, 60 grams of hashish, and a small quantity of ganja were seized.