BENGALURU PRESS CLUB: ಚುನಾವಣೆಗೆ ಅಖಾಡ ರೆಡಿ, ಜು. 7 ರಂದು ಮತದಾನ

ಬೆಂಗಳೂರು, ಜುಲೈ,2,2024 (www.justkannada.in): ನಗರದ ಪ್ರತಿಷ್ಠಿತ  ʼ ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರುʼ ಚುನಾವಣೆ ದಿನಾಂಕ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿ ಮೂವರು ಪತ್ರಕರ್ತರು ಕಣದಲ್ಲಿದ್ದಾರೆ.

ಸುದೀರ್ಘ ಇತಿಹಾಸ ಹೊಂದಿರುವ, ಬೆಂಗಳೂರು ಕಬ್ಬನ್‌ ಪಾರ್ಕ್‌ ಆವರಣದಲ್ಲಿರುವ ʼಪ್ರೆಸ್‌ ಕ್ಲಬ್‌ ʼ ಗೆ ಈಗ ಚುನಾವಣೆ ಬಿಸಿ. ಸದಾ ರಾಜಕಾರಣಿಗಳ ಚಲನವಲನ, ರಾಜಕೀಯ ತಂತ್ರಗಾರಿಕೆ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತರಿಗೆ ಈಗ ಖುದ್ದು ಚುನಾವಣೆ ಎದುರಿಸುವ ಸಮಯ. ಇದೇ ಜುಲೈ7 ರ ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಸಂಘದ ಆವರಣದಲ್ಲಿ ಚುನಾವಣೆ ನಡೆಯಲಿದೆ.

ಕ್ಲಬ್‌ ನ ಅಧ್ಯಕ್ಷ ಸ್ಥಾನಕ್ಕಾಗಿ ಮೂವರು ಪತ್ರಕರ್ತರ ನಡುವೆ ಪೈಪೋಟಿ. ಧ್ಯಾನ್‌ ಪೂಣಚ್ಚ, ಆರ್. ಶ್ರೀಧರ ಹಾಗೂ ಸುಭಾಷ್‌ ಹೂಗಾರ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು ಅಂತಿಮವಾಗಿ ಕಣದಲ್ಲಿ  ಸ್ಪರ್ಧಿಸುತ್ತಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೊಡ್ಡ ಬೊಮ್ಮಯ್ಯ, ಟಿ. ಮಂಜುನಾಥ್‌ , ಎಂ.ಡಿ ಶಿವಕುಮಾರ್‌ ಬೆಳ್ಳಿತಟ್ಟೆ, ಹಾಗೂ ವೈ.ಎಸ್.ಎಲ್.‌ ಸ್ವಾಮಿ ನಡುವೆ ಪೈಪೋಟಿ.

ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ್‌ ಹೀರೇಮಠ್‌, ಬಿ.ಎನ್.ಮೋಹನ್‌ ಕುಮಾರ್‌,  ವಿಶ್ವನಾಥ್‌ ಭಾಗವತ್‌ ಕಣದಲ್ಲಿದ್ದಾರೆ.

ಕಾರ್ಯದರ್ಶಿ ಸ್ಥಾನಕ್ಕೆ ಹನುಮೇಶ್‌ ಕೆ.ಯಾವಗಲ್‌, ಜಿ.ವೈ.ಮಂಜುನಾಥ್‌, ಆರ್.ಮಾರುತಿ ಹಾಗೂ ಕೆ.ಎಂ.ಸಂತೋಷ್‌ ಕುಮಾರ್.‌

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಬಿ.ಎನ್.ಧರಣೀಶ್‌, ಬಿ.ನಾರಾಯಣ, ಬಿ.ಎಸ್.ರಾಮಚಂದ್ರ, ರಿಜ್ವಾನ್‌ ಎಂ.ಕೆ ಹಾಗೂ ಶಂಕರ್‌ ಪಾಗೋಜಿ.

ಖಜಾಂಚಿ ಸ್ಥಾನಕ್ಕೆ ಜಿ.ಗಣೇಶ್‌, ಟಿ.ಎನ್.ಸಿದ್ದೇಶ್.‌

ಸಮಿತಿ ಸದಸ್ಯ ಸ್ಥಾನಕ್ಕೆ 19 ಮಂದಿ ಕಣದಲ್ಲಿದ್ದು, ಮಹಿಳಾ ಕೋಟಾದಲ್ಲಿ  ಮಿನಿ ತೇಜಸ್ವಿನಿ ಹಾಗೂ ಎಚ್.ಎಸ್.ಪರಿಮಳ ಕಣದಲ್ಲಿದ್ದಾರೆ.

Key words: Bengaluru press club, election 2024