79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ದತೆ : ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ

ಬೆಂಗಳೂರು,ಆಗಸ್ಟ್,13,2025 (www.justkannada.in): 79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ದತೆ ನಡೆಸಲಾಗುತ್ತಿದ್ದು ಭದ್ರತೆಗೆ 2 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು  ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಸಿದ್ದತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, 79ನೇ ಸ್ವಾತಂತ್ರ್ಯ ದಿನಾಚರಣೆಗೆ  ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಆಗಸ್ಟ್ 15 ರಂದು ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.   ಬೆಳಿಗ್ಗೆ 8ರಿಂದ 11ರವರೆಗೆ ನಿರ್ಬಂಧವಿರಲಿದೆ.  ಬಿಆರ್ ವಿ ಜಂಕ್ಷನ್ ನಿಂದ ಕಾಮರಾಜ ಜಂಕ್ಷನ್ ವರೆಗೆ ಹಾಗೂ ಕಬ್ಬನ್ ಪಾರ್ಕ್ ಸುತ್ತ ಮುತ್ತ ವಾಹನ ಸಂಚಚಾರ ನಿರ್ಬಂಧವಿರಲಿದೆ ಎಂದರು.

ಈ ಬಾರಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಇ-ಪಾಸ್ ವ್ಯವಸ್ಥೆ ಇರುತ್ತದೆ. ಕಾರ್ಯಕ್ರಮಕ್ಕೆ ಬರುವವರು 8 ಗಂಟೆಯೊಳಗೆ ಆಸೀನರಾಗಿರಬೇಕು . ಸೀಗರೇಟ್, ಕೊಡೆ, ಲೈಟರ್ ಲಗೇಜ್ ಬ್ಯಾಗ್ ತರುವಂತಿಲ್ಲ.  ವಿಶೇಷವಾಗಿ 100ಕ್ಕ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.  ಈ ಬಾರಿ ಪರೇಡ್ ನಲ್ಲಿ 30 ತುಕಡಿಗಳು ಭಾಗಿಯಾಗಲಿವೆ.  ಗೋವಾ ಪೋಲಿಸರು,  ಬಿಎಸ್ ಎಫ್ ಡಾಗ್ ಸ್ಕ್ವಾಡ್, ಶಾಲಾ ಮಕ್ಕಳು ಪರೇಡ್  ನಡೆಸಲಿದ್ದಾರೆ. ಪಿಂಕ್ ಪಾಸ್ ಇರುವವರು ಗೇಟ್ 2ರಿಂದ ಪ್ರವೇಶ ಮಾಡಬೇಕು.  ವೈಟ್ ಪಾಸ್ ಇರುವವರು ಮಾಧ್ಯಮ ಗೇಟ್ 4ರಿಂದ ಪ್ರವೇಶ ಮಾಡಬೇಕು. ಭದ್ರತೆಗೆ  2ಸಾವಿರಕ್ಕೂ ಹೆಚ್ಚು ಪೊಲೀಸರ ನೇಮಕ ಮಾಡಲಾಗಿದೆ ಎಂದರು.

Key words: prepare,  79th Independence Day, celebrations, Bengaluru Police Commissioner