Sunday, September 20, 2026

BDA Apartments

Home Front Page ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಹಣ ಮೀಸಲಿಟ್ಟ ಸಿಎಂ: ಬಜೆಟ್​ ನಲ್ಲಿ ಸಿಕ್ಕಿದ್ದೇನು..?

ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಹಣ ಮೀಸಲಿಟ್ಟ ಸಿಎಂ: ಬಜೆಟ್​ ನಲ್ಲಿ ಸಿಕ್ಕಿದ್ದೇನು..?

ಬೆಂಗಳೂರು, ಮಾರ್ಚ್,7,2025 (www.justkannada.in): ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ನಗರದ ಅಭಿವೃದ್ಧಿಗೆ ಬಜೆಟ್​​ನಲ್ಲಿ ಸಾಕಷ್ಟು ಹಣ ನೀಡಲಾಗಿದೆ.

ವಿವಿಧ ಕಾರಿಡಾರ್​ಗಳು, ಕುಡಿಯುವ ನೀರು, ಒಳಚರಂಡಿ, ಕೆರೆಗಳ ಅಭಿವೃದ್ಧಿ ಇತ್ಯಾದಿಗಳಿಗೆ ಸಿದ್ದರಾಮಯ್ಯ ತಮ್ಮ ಬಜೆಟ್ ​​ನಲ್ಲಿ ಸಾವಿರಾರು ಕೋಟಿ ರೂ ನೀಡಿದ್ದಾರೆ.

ರಾಜ್ಯ ಬಜೆಟ್ ನಲ್ಲಿ  ಬೆಂಗಳೂರು ನಗರಕ್ಕೆ  ಕೊಟ್ಟ ಕೊಡುಗೆ ಇದು..

ಬೆಂಗಳೂರಿನಲ್ಲಿ ಟನಲ್ ಕಾರಿಡಾರ್ ಯೋಜನೆಗೆ 19,000 ಕೋಟಿ ರೂ.

“ಬ್ರ್ಯಾಂಡ್ ಬೆಂಗಳೂರು” ಅಡಿ, 1,800 ಕೋಟಿ ರೂ. ಮೊತ್ತದ 21 ಯೋಜನೆಗಳಿಗೆ ಅನುಮೋದನೆ.

ಬೆಂಗಳೂರು ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ನಿರ್ಮಿಸಲು 3 ಸಾವಿರ ಕೋಟಿ ರೂ. ಆರ್ಥಿಕ ನೆರವು. ನಮ್ಮ ಮೆಟ್ರೋ ಹಂತ-3 ಯೋಜನೆ ಅಡಿ 40.50 ಕಿ.ಮಿ. ಉದ್ದದ ಡಬಲ್‌-ಡೆಕ್ಕರ್‌ ಮೇಲ್ಸೇತುವೆ 8,916 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.

ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ನಮ್ಮ ಮೆಟ್ರೋ ಜಾಲ ಅಭಿವೃದ್ಧಿ. 413 ಕೋಟಿ ರೂ. ವೆಚ್ಚದಲ್ಲಿ “ಸಮಗ್ರ ಆರೋಗ್ಯ ಯೋಜನೆ” ಜಾರಿ.

BWSSB ವತಿಯಿಂದ ಬಯೋಗ್ಯಾಸ್-ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್‌ಗಳ ಉಪಯೋಗ ಪಡೆಯಲು PPP ಮಾದರಿಯಲ್ಲಿ ಯೋಜನೆ.

ಬೆಂಗಳೂರು ಬಿಸಿನೆಸ್ ಕಾರಿಡಾರ್‌ ಯೋಜನೆ: 73 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ.

14 ಕೆರೆಗಳ ಅಭಿವೃದ್ಧಿ ಯೋಜನೆಗೆ 35 ಕೋಟಿ ರೂ

50 ಲಕ್ಷ ಜನರಿಗೆ ಉಪಯೋಗವಾಗುವ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಗೆ 5,550 ಕೋಟಿ ರೂ

ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಯಿಂದ 50 ಲಕ್ಷ ಜನರಿಗೆ ನೀರು ಪೂರೈಕೆ.

ಕಾವೇರಿ 6ನೇ ಹಂತ ಯೋಜನೆ ಅನುಷ್ಠಾನಗೊಳಿಸಲು ವಿಸ್ತೃತ ಯೋಜನಾ ವರದಿ ತಯಾರಿಕೆ

ಹವಾಮಾನ ವೈಪರಿತ್ಯದಿಂದ ಉಂಟಾಗುವ ಪ್ರವಾಹ ನಿಯಂತ್ರಣ ಮತ್ತು ಒಳಚರಂಡಿ ವ್ಯವಸ್ಥೆಯ ಸುಧಾರಣೆಗಾಗಿ ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್​ಎಸ್​​ಬಿಗೆ ₹3,000 ಕೋಟಿ ಅನುದಾನ

300 ಕಿಮೀ ರಸ್ತೆ ಅಭಿವೃದ್ಧಿಗೆ ₹3,000 ಕೋಟಿ ರೂ. ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿಗೆ ₹1,070 ಕೋಟಿ ಅನುದಾನ​.

“ಸೇಫ್ ಸಿಟಿ” ಯೋಜನೆಗೆ ₹667 ಕೋಟಿ ರೂ ನೀಡಲಾಗುವುದು. ಈ ಯೋಜನೆಯಡಿಯಲ್ಲಿ 7,500 ಕ್ಯಾಮೆರಾಗಳು, 10 ಡ್ರೋನ್‌ಗಳು, 560 ಬಾಡಿ-ಕ್ಯಾಮ್‌ಗಳು ಅಳವಡಿಸಲಾಗುತ್ತಿದೆ​

ಮಹಿಳಾ ಭದ್ರತೆಗಾಗಿ 60 ಮಹಿಳಾ ಔಟ್-ಪೋಸ್ಟ್ ಠಾಣೆಗಳ ನಿರ್ಮಾಣ. ಬೆಂಗಳೂರಿನಲ್ಲಿ ಸಿಗ್ನಲ್ ಫ್ರೀ ಜಂಕ್ಷನ್​​ ಗಳ ನಿರ್ಮಾಣ

Key words: CM, allocated, lot of money, development, Bengaluru, budget