Tuesday, August 4, 2026

BDA Apartments

Home Crime ಪತ್ನಿ ಸಾವಿನಿಂದ ಮನನೊಂದು ಮಕ್ಕಳ ಜತೆ  ಪತಿ ಆತ್ಮಹತ್ಯೆ.

ಪತ್ನಿ ಸಾವಿನಿಂದ ಮನನೊಂದು ಮಕ್ಕಳ ಜತೆ  ಪತಿ ಆತ್ಮಹತ್ಯೆ.

ಬೆಳಗಾವಿ,ಜೂನ್,20,2021(www.justkannada.in):  ಪತ್ನಿ ಸಾವಿನಿಂದ ಮನನೊಂದು ಮಕ್ಕಳ ಜತೆ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.jk

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಪೊಗತ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ಕಾಡಪ್ಪ(42), ಮಕ್ಕಳಾದ ಮಕ್ಕಳಾದ ಕೀರ್ತಿ (20) ಸ್ಪೂರ್ತಿ (18) ಆತ್ಮಹತ್ಯೆಗೆ ಶರಣಾದವರು.  ಕಾಡಪ್ಪ ಪತಿ ಚನ್ನವ್ವ ರಂಗಾಪುರೆ(40) ಹೃದಯಾಘಾತದಿಂದ ಒಂದು ವಾರದ ಹಿಂದೆ ಮೃತಪಟ್ಟಿದ್ದರು.

ಇದರಿಂದ ಖಿನ್ನತೆಗೆ ಒಳಗಾಗಿದ್ದ ಪತಿ ಕಾಡಪ್ಪ ಇಬ್ಬರು ಮಕ್ಕಳ ಜತೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: belgavi- wife’s –death- Husband –commits- suicide