ಕೆಲವೇ ದಿನಗಳಲ್ಲಿ ಡಿಕೆಶಿಗೆ ಕಠೋರ ಉತ್ತರ. ನಾನು ದೊಡ್ಡ ಬಾಂಬ್ ಸಿಡಿಸಬಹುದು- ಮಾಜಿ ಸಚಿವ ರಮೇಶ್ ಜಾರಕಿಹೊಳಿ.

ಬೆಳಗಾವಿ,ಡಿಸೆಂಬರ್,15,2021(www.justkannada.in):  ಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೆ ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕೆಲವೇ ದಿನಗಳಲ್ಲಿ ಡಿಕೆಶಿಗೆ ಕಠೋರ ಉತ್ತರ ನೀಡುತ್ತೇನೆ.  ನಾನು ದೊಡ್ಡ ಬಾಂಬ್ ಸಿಡಿಸಬಹುದು. ಆದ್ರೆ ಈಗ ಏನು ಹೇಳೋಕೆ ಹೋಗಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ರಮೇಶ್ ಜಾರಕಿಹೊಳಿ, ಕೊನೇ 4 ದಿನಗಳಲ್ಲಿ ಬೆಳಗಾವಿ ರಾಜಕೀಯದಲ್ಲಿ ಬದಲಾವಣೆಯಾಗಿದೆ.  ಬಿಜೆಪಿ ಸೋತಿರುವುದಕ್ಕೆ ಕಾರಣ ಮುಂದಿನ ದಿನಗಳಲ್ಲಿ ಹೇಳುವೆ.  ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಿ ಹೇಳುವೆ. ಡಿಕೆಶಿ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುವೆ. ಸಿದ್ಧರಾಮಯ್ಯಗೆ ಭಯ ಶುರುವಾಗಿದೆ. ವೇಸ್ಟ್ ಬಾಡಿ ಎಂದರು.

ಕೊನೆ  3 ದಿನಗಳಲ್ಲಿ ರಾಜಕೀಯ ಚಿತ್ರಣ ಬದಲಾಯಿತು. ಮೂರು ದಿನ ಲಖನ್ ಜೊತೆ ಮಾತನಾಡಿಯೇ ಇಲ್ಲ.   ನಾನು ಗಟ್ಟಿಯಾಗಿದ್ದೇನೆ. ಗುಡ್ಡದಂತೆ ಇದ್ದೇನೆ ಗಟ್ಟಿಯಾಗಿದ್ದೇನೆ.  ಅದಕ್ಕೆ ನನಗೆ ಸೋಲಿನ ಹೊಣೆ. ನಾನು ಗಟ್ಟಿ ಅಂತಾ ಗೊತ್ತಾಯಿತಲ್ಲ.  ನಮ್ಮ ಪಕ್ಷ ಸೋತಿದೆ ಅದರ ಬಗ್ಗೆ ಆಂತರಿಕವಾಗಿ ಚರ್ಚೆ ಮಾಡುತ್ತೇವೆ. ಎಲ್ಲಿ ತಪ್ಪಾಗಿದೆ ಎಂದು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.

Key words: belgavi-former  minister-Ramesh jarkiholi-kpcc-president-DK shivakumar

ENGLISH SUMMARY…

I will give a strong reply to DKS within a few days: Former Minister Ramesh Jarkiholi
Belagavi, December 15, 2021 (www.justkannada.in): As the Legislative Council polls have ended, former Minister Ramesh Jarkiholi has started expressing his ire upon KPCC President D.K. Shivakumar. “I will give a strong reply to him in a few days. I may explode a big bomb, but I cannot reveal what it is,” he said.
Speaking at Belagavi today, Ramesh Jarkiholi informed that the political scenario in Belagavi has changed within the last four days. “I will disclose the reason why BJP lost in the LC polls in the coming days. I will discuss it at the party and tell you. I will speak about DKS in the coming days. Siddaramaiah has started fearing he is a waste body,” he said.
Keywords: Ramesh Jarkiholi/ KPCC President D.K. Shivakumar/ strong reply