“ಬೆಳಗಾವಿಯಲ್ಲಿ ಮರಾಠಿಗರ ಶೋಷಣೆಯಾಗುತ್ತಿದೆ” : ಶಿವಸೇನೆ ನಾಯಕ ಸಂಜಯ್ ರಾವತ್ 

ಬೆಂಗಳೂರು,ಮಾರ್ಚ್,14,2021(www.justkannada.in) : ಬೆಳಗಾವಿಯಲ್ಲಿ ಮರಾಠಿಗರ ಶೋಷಣೆಯಾಗುತ್ತಿದ್ದು, ಸಮಸ್ಯೆ ಇತ್ಯರ್ಥಕ್ಕೆ ಮಹಾರಾಷ್ಟ್ರ ಸರ್ಕಾರ ಸರ್ವಪಕ್ಷಗಳ ನಿಯೋಗದೊಂದಿಗೆ ಬೆಳಗಾವಿಗೆ ಬರಬೇಕಾಗುತ್ತದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅಸಮಾಧಾನ ಹೊರ ಹಾಕಿದ್ದಾರೆ.

jk

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಳಗಾವಿಯಲ್ಲಿ ಇರುವ ಮರಾಠಿ ಭಾಷಿಕ ಜನರನ್ನು ಅಪರಾಧಿಗಳ ರೀತಿಯಲ್ಲಿ ನೋಡಲಾಗುತ್ತಿದೆ. ಈ ಸಮಸ್ಯೆ ಇತ್ಯರ್ಥಕ್ಕೆ ಮಹಾರಾಷ್ಟ್ರದಿಂದ ಬೆಳಗಾವಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಅಗತ್ಯವಿದೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಕಳೆದ ಎಂಟು ದಿನಗಳಿಂದ ನಿತ್ಯವೂ ಮರಾಠಿಗರ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಶಿವಸೇನೆ ಮುಖಂಡರು ಮತ್ತು ಕಚೇರಿ ಮೇಲೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಇದು ಖಂಡನೀಯ’ ಎಂದಿದ್ದಾರೆ.

ನಮ್ಮ ಬಳಿ ಬಂದೂಕು ಇಲ್ವಾ? ಇದೆಯಲ್ಲಾ

ಬೆಳಗಾವಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಮುಂಬೈ, ಮಹಾರಾಷ್ಟ್ರಕ್ಕೆ ಕರ್ನಾಟಕ, ಬೆಳಗಾವಿ ಜನರು ಬರಬಹುದು. ಆದರೆ, ಮಹಾರಾಷ್ಟ್ರದ ಜನರು ಬೆಳಗಾವಿಗೆ ಹೋಗಬೇಕೆಂದರೆ ತಡೆ ಹಿಡಿಯಲಾಗುತ್ತಿದೆ. ಲಾಠಿ ಚಾರ್ಜ್ ಮಾಡಿ ಬಂದೂಕು ತೋರಿಸಲಾಗುತ್ತಿದೆ. ನಮ್ಮ ಬಳಿ ಬಂದೂಕು ಇಲ್ವಾ? ಇದೆಯಲ್ಲಾ. ಭಾಷಾ ವಿವಾದ ದೊಡ್ಡದು ಮಾಡಬಾರದು, ಇದು ದೇಶದ ಆಂತರಿಕ ವಿಚಾರ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿಲುವು ನಮ್ಮದು

ಪಶ್ಚಿಮ ಬಂಗಾಳದಲ್ಲಿ ನಡೆಯುವ ಹಿಂಸಾಚಾರ ಕೇಂದ್ರ ಸರ್ಕಾರಕ್ಕೆ ಕಾಣುತ್ತಿದೆ. ಚುನಾವಣೆ ನಡೆಯುವ ರಾಜ್ಯಗಳಲ್ಲಿನ ಹಿಂಸಾಚಾರ ಮಾತ್ರ ಕೇಂದ್ರ ಸರ್ಕಾರಕ್ಕೆ ಕಾಣುತ್ತದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿಲುವು ನಮ್ಮದಿದೆ ಎಂದಿರುವ ಸಂಜಯ್ ರಾವತ್‌ ಅವರು, ಆಕ್ರೋಶಭರಿತವಾಗಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಪರಿಸ್ಥಿತಿ ಬಿಗಡಾಯಿಸಿದರೆ ಮಹಾರಾಷ್ಟ್ರ ಸರ್ಕಾರ, ಶಿವಸೇನೆ ಜವಾಬ್ದಾರರಲ್ಲ

Belgaum-Marathi-Exploiting-Shiv Sena nayaka-SanjayRawat 

ಈ ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಮಹಾರಾಷ್ಟ್ರ ಸರ್ಕಾರ, ಶಿವಸೇನೆ ಜವಾಬ್ದಾರರಲ್ಲ. ಬಿಜೆಪಿ ಬೆಂಬಲಿತ ಸಂಘಟನೆಯಿಂದ ಮರಾಠಿಗರ ಮೇಲೆ ಹಲ್ಲೆ ನಡೆಸುತ್ತಿದೆ. ಬೆಳಗಾವಿ ಮೂಲದ ಸಚಿವರೊಬ್ಬರು ಹಗರಣದಲ್ಲಿ ಸಿಲುಕಿದ್ದಾರೆ. ಹೀಗಾಗಿ, ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ವಾತಾವರಣ ನಿರ್ಮಾಣವಾಗಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

key words : Belgaum-Marathi-Exploiting-Shiv Sena nayaka-Sanjay
Rawat