Sunday, August 30, 2026

BDA Apartments

Home Crime ಡೆತ್ ನೋಟ್ ಬರೆದು ಡಿಪೋದಲ್ಲೇ ಆತ್ಮಹತ್ಯೆಗೆ ಶರಣಾದ ಕೆ ಎಸ್ ಆರ್ ಟಿಸಿ ಬಸ್ ಕಂಡಕ್ಟರ್

ಡೆತ್ ನೋಟ್ ಬರೆದು ಡಿಪೋದಲ್ಲೇ ಆತ್ಮಹತ್ಯೆಗೆ ಶರಣಾದ ಕೆ ಎಸ್ ಆರ್ ಟಿಸಿ ಬಸ್ ಕಂಡಕ್ಟರ್

ಬೆಳಗಾವಿ:ಜುಲೈ-8: ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ಒಬ್ಬರು ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತು ಬಸ್ ಡಿಪೊದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಕೆದನೂರು ಗ್ರಾಮದ ಆನಂದ್ ಕೊಲ್ಕಾರ್ (55) ಆತ್ಮಹತ್ಯೆಗೆ ಶರಣಾಗಿದ್ದು, ಡೆತ್ ನೋಟ್ ಕೂಡ ಬರೆದಿಟ್ಟಿರುವುದು ಪತ್ತೆಯಾಗಿದೆ. ಕರ್ತವ್ಯಕ್ಕೆ ಬರುವ ಚಾಲಕರು-ನಿರ್ವಾಹಕರು ಬೆಳಗಿನ ಜಾವ ಡಿಪೋದ 2ನೇ ಘಟಕ್ಕೆ ಆಗಮಿಸಿದಾಗ ಆನಂದ್ ನೇಣುಬಿಗಿದ ಸ್ಥಿತಿಯಲ್ಲಿ ಡಿಪೋದಲ್ಲೇ ಕಂಬಕ್ಕೆ ನೇತಾಡುತ್ತಿರುವುದು ಕಂಡು ಬಂದಿದೆ.

ಚಾಲಕರಿಗೆ ಮತ್ತು ನಿರ್ವಾಹಕರಿಗೆ ಕರ್ತವ್ಯ ನಿಯೋಜಿಸುವ ಅಧಿಕಾರಿ ‘ಮುಲ್ಲಾ’ ಎಂಬುವರ ವಿರುದ್ಧ ಮೃತ ಆನಂದ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆನಂದ್ ಬರೆದಿಟ್ಟಿರುವ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ಇತರ ಸಿಬ್ಬಂದಿಗೂ ಆಗುತ್ತಿರುವ ಕಿರುಕುಳ ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಮುಲ್ಲಾ ವಿರುದ್ಧ ಚಾಲಕರು ಹಾಗೂ ನಿರ್ವಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಡೆತ್ ನೋಟ್ ಬರೆದು ಡಿಪೋದಲ್ಲೇ ಆತ್ಮಹತ್ಯೆಗೆ ಶರಣಾದ ಕೆ ಎಸ್ ಆರ್ ಟಿಸಿ ಬಸ್ ಕಂಡಕ್ಟರ್
Belgaum,KSRTC Bus,Conductor,Hanging suicide