ಬೆಳಗಾವಿ ಚಳಿಗಾಲ ಅಧಿವೇಶನ ಆರಂಭ: ಅಗಲಿದ ಗಣ್ಯರಿಗೆ ಸಂತಾಪ

ಬೆಳಗಾವಿ,ಡಿಸೆಂಬರ್,8,2025 (www.justkannada.in): ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು.

ವಿಧಾನಸಭೆಯಲ್ಲಿ ವಂದೇಮಾತರಂ ಗೀತೆ ಮೂಲಕ ಕಲಾಪ ಆರಂಭಿಸಲಾಯಿತು. ಸ್ಪೀಕರ್ ಯುಟಿ ಖಾದರ್ ಸದಸ್ಯರಿಗೆ ಸಂವಿಧಾನ ಪೀಠಿಕೆ ಬೋಧನೆ ಮಾಡಿದರು.  ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಸಾಹಿತಿ ಎಸ್ ಎಲ್ ಭೈರಪ್ಪ, ಮಾಜಿ ಶಾಸಕ ಆರ್.ವಿ ದೇವರಾಜ್, ಹಾಸ್ಯನಟ ಉಮೇಶ್  ಅವರಿಗೆ ಸಂತಾಪ ಸೂಚಿಸಿದರು.

ವಿಧಾನಪರಿಷತ್ ನಲ್ಲೂ ಕಲಾಪ ಆರಂಭವಾಗಿದ್ದು ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು.  ಹಲವು ವಿಚಾರಗಳನ್ನಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ದ ಮುಗಿಬೀಳಲು ವಿಪಕ್ಷ ಸದಸ್ಯರು ಸಜ್ಜಾಗಿದ್ದಾರೆ.

Key words: Belgaum, winter session, begins