ಬೆಳಗಾವಿ,ಡಿಸೆಂಬರ್,8,2025 (www.justkannada.in): ಇಂದಿನಿಂದ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ನಡುವೆ ಮತ್ತೆ ಎಂಇಎಸ್ ಕಾರ್ಯಕರ್ತರು ಪುಂಡಾಟ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನ ವಿರೋಧಿಸಿ ನಡೆಸಲು ಮುಂದಾಗಿದ್ದ ಎಂಇಎಸ್ ಮಹಾಮೇಳಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಠಾಕ್ರೆ ಬಣದ ವಿಜಯ ದೇವಣೆ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದರು.
ಈ ವೇಳೆ ಪೊಲೀಸರು ಪ್ರತಿಭಟನೆಯನ್ನ ತಡೆದು ಮಾಜಿ ಮೇಯರ್ ಮಾಳೋಜಿ ಅಷ್ಟೇಕರ್, ಶುಭಂ ಸಳಕೆ ಸೇರಿ ಎಂಇಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಎಂಇಎಸ್ ಮಹಾಮೇಳಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ಬಸ್ ನಡೆದು ಬಸ್ ಆಕ್ರೋಶ ಹೊರಹಾಕಿದ್ದಾಉದ್ದಟತನ ತೋರಿದ್ದಾರೆ.
Key words: Belgaum session, MES, police, custody







