ದ್ವೇಷ ಭಾಷಣ ಪ್ರತಿಬಂಧಕ ಬಿಲ್ ಮಂಡನೆ: ಬಿಜೆಪಿಯಿಂದ ವಿರೋಧ

ಬೆಳಗಾವಿ,ಡಿಸೆಂಬರ್,10,2025 (www.justkannada.in):  ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಬಿಲ್ ಮಂಡನೆ ಮಾಡಲಾಗಿದೆ.

ವಿಧಾಣಸಭೆ ಕಲಾಪದಲ್ಲಿ  ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು ದ್ವೇಷ ಭಾಷಣ ಪ್ರತಿಬಂಧಕ ಬಿಲ್ ಮಂಡನೆ ಮಾಡಿದರು.  ಈ ವಿಧೇಯಕಕ್ಕೆ ವಿಪಕ್ಷ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದ್ದು,   ಬಿಲ್ ಮಂಡನೆ ವೇಳೆ ಒಪ್ಪಿಗೆ ಇಲ್ಲ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರನ್ನ ಟಾರ್ಗೆಟ್ ಮಾಡಿ ದ್ವೇಷ ಭಾಷಣ ಪ್ರತಿಬಂಧಕ ಬಿಲ್ ಮಂಡನೆ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.

ಬಿಲ್ ಅನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದು ಶಾಸಕ ಎ.ಜಿ ಪೊನ್ನಣ್ಣ ಸುಪ್ರೀಂಕೋರ್ಟ್ ಆದೇಶದಂತೆ ಬಿಲ್ ಮಂಡನೆ ಮಾಡಲಾಗಿದೆ ಎಂದಿದ್ದಾರೆ. ಹಾಗೆಯೇ  ಸಚಿವ ದಿನೇಶ್ ಗುಂಡೂರಾವ್  ಮಾತನಾಡಿ ಬಿಜೆಪಿಯವರು ದ್ವೇಷಭಾಷಣ ಮಾಡುತ್ತಿದ್ದರು.  ಹೀಗಾಗಿಯೇ ಮಂಡನೆ ಮಾಡಲಾಗಿದೆ ಎಂದರು.

Key words: BJP, opposes, introduction, anti-hate speech bill, Session