ರಾಷ್ಟ್ರಭಕ್ತರ ಪ್ರತಿಮೆ ಧ್ವಂಸಗೊಳಿಸಿದ್ದು ಸರಿಯಲ್ಲ: ಎಂಇಎಸ್ ಪುಂಡರ ವಿರುದ್ಧ ಕ್ರಮ- ಸಿಎಂ ಬೊಮ್ಮಾಯಿ ಭರವಸೆ.

ಹುಬ್ಬಳ್ಳಿ,ಡಿಸೆಂಬರ್,18,2021(www.justkannada.in):  ಬೆಳಗಾವಿ ಜಿಲ್ಲೆಯ ಅನಗೋಳದ ಕನಕದಾಸ ಕಾಲೊನಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ  ಪ್ರತಿಮೆಯನ್ನ ಪುಂಡರು ಭಗ್ನಗೊಳಿಸಿದ್ದು ಇದೀಗ ಎಂಇಎಸ್ ಪುಂಡರ ವಿರುದ್ಧ ನಾಡಿನೆಲ್ಲೆಡೆ ಆಕ್ರೋಶ ಹೆಚ್ಚಾಗಿದೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಮೆ ಮಾಢುವುದು ದೇಶಪ್ರೇಮಿಗಳಿಗೆ ಗೌರವ ಸೂಚಿಸುವುದಕ್ಕಾಗಿ. ಅಂಥಾ ಮಹಾನ್ ನಾಯಕರನ್ನ ಅವಮಾನಿಸುವುದು ಸರಿಯಲ್ಲ.  ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಬೆಳಗಾವಿಯಲ್ಲಿ ಈಗಾಗಲೇ ಕೆಲ ಆರೋಪಿಗಳನ್ನ ಬಂಧಿಸಲಾಗಿದೆ ಎಂದರು.

ಸಮಾಜದಲ್ಲಿ ಗಲಭೆ ಉಂಟು ಮಾಡುವುದು ಸರಿಯಲ್ಲ. ಗಲಭೆ ಹಿಂದೆ ಹಲವಾರು ಕಾರಣಗಳಿವೆ ಬೆಳಗಾವಿ ಅಧಿವೇಶನ ಸೇರಿ ಹಲವು ಕಾರಣಗಳಿವೆ. ಈ ರೀತಿ ಪದೇ ಪದೇ ಆಗದಂತೆ ಕ್ರಮ  ಪ್ರತಿಮೆಗಳನ್ನ ಭಗ್ನಗೊಳಿಸಿವುದು ದೇಶಭಕ್ತರ ಕೆಲಸವಲ್ಲ. ಕೆಲ ಪುಂಡರಿಂದ ಇಂತಹ ಕೃತ್ಯವೆಸಗಿದ್ದಾರೆ ಅಂತವರನ್ನ ಸದೆ ಬಡಿಯದೆ ಬಿಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

Key words: belagavi-sangolli rayanna- statue -Action –against- MES-CM-Bommai