ಸದನದಲ್ಲಿ ಸದ್ದು : ಮಧುಮೇಹಿಗಳ ಪಾಲಿಗೆ ಕಹಿಯಾಯ್ತ  “ಬಿಯರ್“.!

The sugar content in beers should be reduced by 25%. But currently, some pubs are selling beers with more than 35% sugar content. Apart from China, India is the capital of diabetes. In such a situation, consuming beers with more sugar content will worsen the health condition of the people.

 

ಬೆಂಗಳೂರು, ಡಿ.೧೮,೨೦೨೫:  ರಾಜ್ಯದಲ್ಲಿ 970 ಪಬ್‌ಗಳಿದ್ದು, 77.97 ಲಕ್ಷ ಲೀಟರ್ ಡ್ರಾಟ್ ಬಿಯರ್ ಉತ್ಪಾದನೆಯಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ. ದಿನನಿತ್ಯ ಉತ್ಪತ್ತಿಯಾಗುವ ಬಿಯರ್ ಪರೀಕ್ಷೆ ಮಾಡಲು ಅಬಕಾರಿ ಇಲಾಖೆಯಲ್ಲಿ 2 ರಾಸಾಯನಿಕ ಪ್ರಯೋಗಾಲಯಗಳಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಕೆ.ಶಿವಕುಮಾರ್‌ ಒತ್ತಾಯಿಸಿದರು.

ವಿಧಾನ ಮಂಡಲ ಅಧಿವೇಶನದಲ್ಲಿ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ಪಡೆದು ಡಾ.ಕೆ.ಶಿವಕುಮಾರ್ ಮಾತನಾಡಿದ್ದು ಹೀಗೆ..

ಬೆಂಗಳೂರು ಮತ್ತು ಧಾರವಾಡದಲ್ಲಿ ಪ್ರಯೋಗಾಲಯವು ಕಾರ್ಯನಿರ್ವಹಿಸುತ್ತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರಯೋಗಾಲಯ ಹೆಚ್ಚಿಸಿ ಪ್ರತಿನಿತ್ಯ ಉತ್ಪತ್ತಿಯಾಗುವ ಬಿಯರ್ ಅನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು.

ಬಿಯರ್‌ಗಳಲ್ಲಿ ಸಕ್ಕರೆ ಅಂಶವನ್ನು ಶೇ.25 ರಷ್ಟಿಂದ ಇನ್ನೂ ಕಡಿಮೆ ಮಾಡಬೇಕು. ಆದರೆ ಪ್ರಸ್ತುತ ಕೆಲವು ಪಬ್‌ಗಳಲ್ಲಿ ಶೇ.35 ಕ್ಕಿಂತ ಹೆಚ್ಚು ಸಕ್ಕರೆ ಅಂಶವನ್ನು ಹೆಚ್ಚಿಸಿ ಮಾರಾಟ ಮಾಡಲಾಗುತ್ತಿದೆ. ಚೀನಾ ಹೊರತುಪಡಿಸಿದರೆ ಭಾರತ ಮಧುಮೇಹಿಗಳ ರಾಜಧಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಬಿಯರ್‌ಗಳಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸಿ ಸೇವನೆ ಮಾಡುವುದರಿಂದ ಜನರ ಆರೋಗ್ಯದ ಸ್ಥಿತಿ ಹದಗೆಡಲಿದೆ.

ಕೋಟ್ಯಾಂತರ ರೂಪಾಯಿ ಆದಾಯ ಬರುವ ಇಲಾಖೆಯಲ್ಲಿ ಪ್ರಯೋಗಾಲಯವನ್ನು ಹೆಚ್ಚಿಸಿ ಕಡ್ಡಾಯವಾಗಿ ಬಿಯರ್ ಗುಣಮಟ್ಟವನ್ನು ಪರೀಕ್ಷಿಗೆ ಒಳಪಡಿಸಬೇಕು. ಕೆಲವು ಪಬ್‌ಗಳ ಸಣ್ಣ ಪ್ರಯೋಗಾಯಗಳಲ್ಲಿ ಬಿಯರ್ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷೆ ಮಾಡುತ್ತಿಲ್ಲ. ತಿಂಗಳಿಗೊಮ್ಮೆ ಪರೀಕ್ಷೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಕುರಿತು ಮಾನ್ಯ ಅಬಕಾರಿ ಸಚಿವರಾದ ಆರ್.ಜಿ.ತಿಮ್ಮಾಪುರ ಅವರು ಪ್ರತಿಕ್ರಿಯಿಸಿ, ಬ್ರಿವೇರಿಗಳಲ್ಲಿ  ಉತ್ಪಾದನೆಯಾಗುವ ಬಿಯರ್ ಗಳಲ್ಲಿ ಇಥೈಲ್ ಆಲ್ಕೋಹಾಲ್ ಇರುವಿಕೆ ಮತ್ತು ಮಿಥೈಲ್ ಆಲ್ಕೋಹಾಲ್, Obnoxious Substance  ಮತ್ತು Suspended Sediments ಇಲ್ಲದಿರುವಿಕೆಯನ್ನು ಖಚಿತಪಡಿಸಿಕೊಂಡು ಮಾನವ ಸೇವನೆಗೆ ಯೋಗ್ಯವಾಗಿದೆ ಎಂದು ರಾಸಾಯನಿಕ ವಿಶ್ಲೇಷಣಾ ವರದಿಯನ್ನು ನೀಡಲಾದ ನಂತರವೇ ಬಿಯರ್ ಅನ್ನು ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

                                                 ರಾಜ್ಯದಲ್ಲಿ 2025-26 ನೇ ಸಾಲಿನ ಅಕ್ಟೋಬರ್ 2025 ರ ಅಂತ್ಯಕ್ಕೆ ಸ್ವತಂತ್ರ ಆರ್.ವಿ.ಬಿ (Independent RVB)  64 ಹಾಗೂ ವಿವಿಧ ರೀತಿಯ ಸನ್ನದಿಗೆ ಹೊಂದಿಕೊಂಡಂತಿರುವ ಆರ್.ವಿ.ಬಿ (Attached RVB) 915 ಹೀಗೆ, ಪ್ರಸ್ತುತ ಒಟ್ಟು 979 ಸಂಖ್ಯೆಯ  ಆರ್.ವಿ.ಬಿ (ಪಬ್) ಸನ್ನದುಗಳು ಇರುತ್ತವೆ.

ಆರ್.ವಿ.ಬಿ ಸನ್ನದುಗಳಲ್ಲಿ 2023-24ನೇ ಆರ್ಥಿಕ ಸಾಲಿನಲ್ಲಿ 80.89 ಲಕ್ಷ ಲೀಟರ್ ಡ್ರಾಟ್ ಬಿಯರ್ ಹಾಗೂ  2024-25 ಆರ್ಥಿಕ ಸಾಲಿನಲ್ಲಿ 77.97 ಲಕ್ಷ ಲೀಟರ್ ಡ್ರಾಟ್ ಬಿಯರ್ ಮಾರಾಟವಾಗಿರುತ್ತದೆ ಎಂದು ಮಾಹಿತಿ ನೀಡಿದರು.

key words: HOT Debate, in the House, “Beer”, is bitter for, diabetics!

SUMMARY:

HOT Debate in the House: “Beer” is bitter for diabetics!

The sugar content in beers should be reduced by 25%. But currently, some pubs are selling beers with more than 35% sugar content. Apart from China, India is the capital of diabetes. In such a situation, consuming beers with more sugar content will worsen the health condition of the people.