ಬೆಂಗಳೂರಿನ ಎಲ್ಲಾ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್.

ಬೆಂಗಳೂರು,ಅಕ್ಟೋಬರ್,27,2021(www.justkannada.in):   ಬೆಂಗಳೂರಿನ ಎಲ್ಲಾ ಕಟ್ಟಡಗಳಿಗೂ ಬಿಬಿಎಂಪಿ ನೋಟಿಸ್‌ ನೀಡಿದ್ದು, ನೋಟಿಸ್ ​ಗೆ ಉತ್ತರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿರುವ ಅಕ್ರಮ‌ ಕಟ್ಟಡಗಳು, ಪ್ಲ್ಯಾನ್ ವೈಲೇಷನ್ ಮಾಡಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯಲು ಬಿಬಿಎಂಪಿ ಮುಂದಾಗಿದ್ದು,  ಬೆಂಗಳೂರಿನಲ್ಲಿ ಒಟ್ಟು 23 ಲಕ್ಷ ಕಟ್ಟಡಗಳಿವೆ. ಇದರಲ್ಲಿ ಚಿಕ್ಕ ಮನೆಯಿಂದ ಹಿಡಿದು ದೊಡ್ಡ ಕಟ್ಟಡಗಳಿಗೂ ಬಿಬಿಎಂಪಿ ನೋಟಿಸ್ ನೀಡಿದೆ.bbmp-extended-property-tax-exemption-period-2021-22

ಬಿಬಿಎಂಪಿ ನೋಟೀಸ್ ಕೊಟ್ಟ ಏಳು ದಿನದೊಳಗೆ ಕಟ್ಟಡ ನಿರ್ಮಾಣಕ್ಕೆ ಪಡೆದ ಅನುಮತಿ ಪತ್ರ, ಓಸಿ, ಖಾತಾ ಸೇರಿದಂತೆ ಎಲ್ಲಾ ಮಾಹಿತಿಗಳ ದಾಖಲೆಯನ್ನು ಹತ್ತಿರದ ಬಿಬಿಎಂಪಿ ಕಚೇರಿಗೆ ಹೋಗಿ ನೀಡಬೇಕು ಎಂದು ಬಿಬಿಎಂಪಿ ತಿಳಿಸಿದೆ. ಹಾಗೆಯೇ  ಮಾಹಿತಿ  ನೀಡದಿದ್ದರೇ ಕಟ್ಟಡಗಳ ವಿರುದ್ಧ, ಅವಶ್ಯಕತೆ ಬಿದ್ದಲ್ಲಿ ತೆರವು ಕಾರ್ಯಚರಣೆ ಆರಂಭವಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

Key words: BBMP- notice – all- buildings – Bangalore.