ನನ್ನ ಜತೆಗೆ ಶಾಸಕರಾದವರು ಸಿಎಂ, ಡಿಸಿಎಂ ಆದರೂ ನನಗೆ ಅವಕಾಶ, ಅದೃಷ್ಟ ಇಲ್ಲ- ಬಸವರಾಜ ರಾಯರೆಡ್ಡಿ

ಯಾದಗಿರಿ,ಆಗಸ್ಟ್,6,2025 (www.justkannada.in):  ನನ್ನ ಜತೆಗೆ ಶಾಸಕರಾದವರು  ಸಿಎಂ, ಡಿಸಿಎಂ ಮತ್ತು ಮಂತ್ರಿಗಳಾಗಿದ್ದಾರೆ. ಆದರೆ, ನನಗೆ ಅವಕಾಶ ಮತ್ತು ಅದೃಷ್ಟವಿಲ್ಲ  ಶಾಸಕ ಬಸವರಾಜ ರಾಯರೆಡ್ಡಿ  ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶಾಸಕ ಬಸವರಾಜ ರಾಯರೆಡ್ಡಿ, 1985ರಲ್ಲಿ ನನ್ನ ಜತೆಗೆ ಶಾಸಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು, ಜಿ. ಪರಮೇಶ್ವರ್  ಡಿಸಿಎಂ, ಮಂತ್ರಿಯಾದರು. ಆದರೆ ನನಗೆ ಅದೃಷ್ಟ ಇಲ್ಲ ಎಂದರು.

ಕಾಂಗ್ರೆಸ್ ಕಟ್ಟುವಲ್ಲಿ ಪ್ರಮುಖರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿಲ್ಲ. ನನಗೂ ಅದೃಷ್ಟ ಮತ್ತು ಅವಕಾಶ ಇಲ್ಲದ್ದಕ್ಕೆ ಸಿಎಂ ಆರ್ಥಿಕ ಸಲಹೆಗಾರ ಹುದ್ದೆಗೆ ಸಂತೋಷಪಡಬೇಕಾಗಿದೆ. ಎಲ್ಲವನ್ನೂ ಸಮಯ ಮತ್ತು ಸಂದರ್ಭ ನಿರ್ಧರಿಸುತ್ತದೆ ಎಂದರು.

ರಾಜಕಾರಣದಲ್ಲಿ ನನ್ನನ್ನು ನಂಬಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.

Key words: MLAs, CM, DCM, no opportunity, Basavaraja Rayareddy