ಸಿಎಂ ಆಗಿ ಬಸವರಾಜ ಬೊಮ್ಮಾಯಿ 1 ವರ್ಷ ಪೂರೈಸಿದ ಹಿನ್ನೆಲೆ: ಜುಲೈ 28 ರಂದು ಬೃಹತ್ ಸಮಾವೇಶ- ಸಚಿವ ಸುಧಾಕರ್.

ಬೆಂಗಳೂರು,ಜುಲೈ,16,2022(www.justkannada.in):  ಜುಲೈ 28 ರಂದು ಸಿಎಂ ಆಗಿ ಬಸವರಾಜ ಬೊಮ್ಮಾಯಿ  1 ವರ್ಷ ಪೂರೈಸಿದ ಹಿನ್ನೆಲೆ ದೊಡ್ಡಬಳ್ಳಪುರದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್,  ಜುಲೈ 28 ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಸ್ವಚ್ಛ ಆಡಳಿತದ  ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ.  ಸಮಾವೇಶದ ಬಗ್ಗೆ ಈಗಾಗಲೇ ಸಭೆ ಮಾಡಿದ್ದೇವೆ ಎಂದರು.

75 ದಿನಗಳೊಳಗೆ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವ ಗುರಿ ಹೊಂದಲಾಗಿದೆ.  ಕೊರೋನಾ ಕಡಿಮೆಯಾಗಿದೆ ಎಂದು  ಯಾರೂ ನಿರ್ಲಕ್ಷಿಸಬೇಡಿ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Basavaraja Bommai-completing-1 year – CM-28th July-Minister-Sudhakar.