ನಾನು ಅದೃಷ್ಟದ ಸಿಎಂ ಎಂದಿದ್ದೇಕೆ ಬಸವರಾಜ ಬೊಮ್ಮಾಯಿ?!

ಬೆಂಗಳೂರು, ಆಗಸ್ಟ್ 07, 2021 (www.justkannada.in): ನಾನು ಅದೃಷ್ಟದ ಸಿಎಂ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.

ಹೌದು. ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಯಾರು ಕೂಡ ನಮಗೆ ಇಂಥದ್ದೇ ಖಾತೆ ಬೇಕೆಂದು ಕೇಳಿಲ್ಲ ಹಾಗಾಗಿ ನಾನು ಬಹಳ ಅದೃಷ್ಟದ ಸಿಎಂ ಎಂದು ಹೇಳಿದರು.

ಖಾತೆ ಹಂಚಿಕೆಯಲ್ಲಿ ಯಾರೂ ಪ್ರಭಾವ ಬೀರಿಲ್ಲ, ಯಾವುದೇ ಗೊಂದಲಗಳೂ ಇಲ್ಲ. ರಾಜಭವನಕ್ಕೆ ಪಟ್ಟಿ ಕಳುಹಿಸುತ್ತೇವೆ. ಇನ್ನೊಂದು ಗಂಟೆಯಲ್ಲಿ ಸಚಿವರಿಗೆ ಖಾತೆ ಹಂಚಿಕೆ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.