ವೈಯಕ್ತಿಕ ಕಾರಣಕ್ಕೆ ನೇಹಾ ಕೊಲೆ ಎಂದ ಸಿಎಂ ಸಿದ್ದರಾಮಯ್ಯ ವಿರುದ್ದ ಬೊಮ್ಮಾಯಿ ಕಿಡಿ.

ಹಾವೇರಿ,ಏಪ್ರಿಲ್,20,2024 (www.justkannada.in):  ಹುಬ್ಬಳಿಯಲ್ಲಿನ ವಿದ್ಯಾರ್ಥಿನಿ ನೇಹಾ ಕೊಲೆ ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ, ಇಂಥತಹ ಘಟನೆಯನ್ನೂ ಸಿಎಂ ಸಿದ್ದರಾಮಯ್ಯ ಹಗುರವಾಗಿ ತೆಗೆದುಕೊಂಡಿದ್ದಾರೆ.  ಹೇಳಿಕೆ ನೀಡಿದ್ರೆ ಜವಾಬ್ದಾರಿ ಮುಗಿಯಿತಾ..? ಎಂದು ಹರಿಹಾಯ್ದರು.

ಜನ ಭಯಭೀತರಾಗಿದ್ದಾರೆ ರಾತ್ರಿ ಮಲಗುತ್ತಿಲ್ಲ. ಸಬೂಬು ನೀಡದೇ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿ ಎಂದು ಬೊಮ್ಮಾಯಿ ಆಗ್ರಹಿಸಿದರು.

Key words: Basavaraj Bommai -CM -Siddaramaiah-Neha –murder –case