Tuesday, September 15, 2026

BDA Apartments

ಬೊಮ್ಮಾಯಿ ಶ್ಯಾಡೋ ಸಿಎಂ ಆಗಿ ಕೆಲಸ ಮಾಡಲ್ಲ: ಬಿಎಸ್ ವೈ 100 ವರ್ಷ ನೆಮ್ಮದಿಯಾಗಿ ಇ...
Home Front Page ಬೊಮ್ಮಾಯಿ ಶ್ಯಾಡೋ ಸಿಎಂ ಆಗಿ ಕೆಲಸ ಮಾಡಲ್ಲ: ಬಿಎಸ್ ವೈ 100 ವರ್ಷ ನೆಮ್ಮದಿಯಾಗಿ ಇರಲಿ...

ಬೊಮ್ಮಾಯಿ ಶ್ಯಾಡೋ ಸಿಎಂ ಆಗಿ ಕೆಲಸ ಮಾಡಲ್ಲ: ಬಿಎಸ್ ವೈ 100 ವರ್ಷ ನೆಮ್ಮದಿಯಾಗಿ ಇರಲಿ ಎಂದ ಶಾಸಕ ಯತ್ನಾಳ್.

ಬೆಂಗಳೂರು,ಜುಲೈ,28,2021(www.justkannada.in): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಯಾಡೋ ಆಗಿ ಕೆಲಸ ಮಾಡಲ್ಲ. ಬಿಎಸ್‌ವೈ ಕುಟುಂಬದಿಂದ ದೂರ ಉಳಿದು ಕೆಲಸ ಮಾಡ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.jk

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ರಾಜ್ಯದಲ್ಲಿ ಬದಲಾವಣೆ ಆಗುತ್ತೆ ನೋಡುತ್ತಿರಿ. ಸಿಎಂ ಬೊಮ್ಮಾಯಿ ಬಿಜೆಪಿ ಶಾಸಕರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಾರೆ. ಬೊಮ್ಮಾಯಿ ಶ್ಯಾಡೋ ಸಿಎಂ ಆಗಿ ಕೆಲಸ ಮಾಡಲ್ಲ. ಬೊಮ್ಮಾಯಿಯವರು ಅಷ್ಟು ತಿಳಿವಳಿಕೆ ಇಲ್ಲದವರಲ್ಲ. ಯಡಿಯೂರಪ್ಪಜೀವನ ನೆಮ್ಮದಿ, ಸುಖವಾಗಿರಲಿ. ಯಡಿಯೂರಪ್ಪ 100 ವರ್ಷ ನೆಮ್ಮದಿಯಾಗಿ ಇರಲಿ.  ಬಿಎಸ್ ವೈ ನಿರ್ಗಮನದ ಬಳಿಕ ಕೆಟ್ಟದಾಗಿ ಮಾತಾಡಬಾರದು. ಕೆಟ್ಟದಾಗಿ ಮಾತಾಡುವುದು ಬುದ್ಧಿವಂತರ ಲಕ್ಷಣವಲ್ಲ ಎಂದು ಹೇಳಿದರು.

ಹಾಗೆಯೇ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಹೈಕಮಾಂಡ್ ಆದೇಶ ಮಾಡಿದರೆ ನಾನು ಸಚಿವನಾಗುತ್ತೇನೆ ಎಂದರು.

Key words: basavaraj bommai-Bommai –doesn’t -work – Shadow-CM-Basanagowdapatil yatnal