ಬಸನಗೌಡ ಯತ್ನಾಳ್ ಹೇಳಿಕೆ ಬಿಜೆಪಿ ಜೊತೆಗೆ ಜನರೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ : ಸಚಿವ ಕೆ.ಎಸ್.ಈಶ್ವರಪ್ಪ ಟೀಕೆ

ಶಿವಮೊಗ್ಗ,ಡಿಸೆಂಬರ್,26,2020(www.justkannada.in) : ಶಾಸಕ ಬಸನಗೌಡ ಯತ್ನಾಳ್ ಒಳ್ಳೆಯ ನಾಯಕ. ಕಠೋರ ಹಿಂದುತ್ವವಾದಿ. ಅದರೆ, ಹೇಳಿಕೆ ಕೊಟ್ಟು ಮುಜುಗರಕ್ಕೆ ಸಿಲುಕುತ್ತಾರೆ. ಅವರ ಹೇಳಿಕೆಯನ್ನು ಬಿಜೆಪಿ ಜೊತೆಗೆ ಜನರೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.Teachers,solve,problems,Government,bound,Minister,R.Ashokಯತ್ನಾಳ್ ಹೇಳಿಕೆಗಳನ್ನು ರಾಜ್ಯದ ನಾಯಕರು ಗಮನಿಸುತ್ತಿದ್ದಾರೆ. ಅದನ್ನು ಸರಿಪಡಿಸುತ್ತಾರೆ. ನಾನು ಸಹ ಅವರ ಜೊತೆ ಮಾತನಾಡಿದ್ದೇನೆ. ಅದರೂ, ಮತ್ತೆ ಹೀಗೆ ಮಾತನಾಡಿದ್ದಾರೆ ಎಂದರು.

ಯತ್ನಾಳ್ ಅವರು ಸಹ ನಮ್ಮ ಪ್ರಮುಖ ನಾಯಕರು. ಪಕ್ಷ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಅಗುವ ಬಗ್ಗೆ ಅವರಿಗೆ ಗೊತ್ತಿದೆ. ಆದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕರೆದು ಮಾತನಾಡುತ್ತೇವೆ ಎಂದಿದ್ದಾರೆ.Basanagowda Yatnal-Along-statement-BJP-People-serious-Not-considering-Minister-K.S.Eshwarappa-criticizedರೈತರ ಹೋರಾಟ ಒಂದು ರಾಜಕೀಯ ಷಡ್ಯಂತ್ರ. ದೇಶದ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಅದಕ್ಕೆ ಕಾಯ್ದೆ ಮೂಲಕ ಅವಕಾಶ ಮಾಡಿಕೊಡಲಾಗಿದ್ದು, ರೈತರು ಒಪ್ಪಿಕೊಂಡಿದ್ದಾರೆ‌. ಆದರೆ, ಕುತಂತ್ರದ ರಾಜಕಾರಣಿಗಳು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ. ಅದರೆ ಇದು ಬಹಳ ದಿನ ನಡೆಯುವುದಿಲ್ಲ. ಇದು ಕಾಂಗ್ರೆಸ್ ಪ್ರೇರಿತ ರೈತರ ಹೋರಾಟ ಎಂದ ಈಶ್ವರಪ್ಪ ಆರೋಪಿಸಿದರು.

key words : Basanagowda Yatnal-Along-statement-BJP-People-serious-Not-considering-Minister-K.S.Eshwarappa-criticized