Saturday, September 19, 2026

BDA Apartments

ಸಿಎಂ ಆಗಲು ಸಾವಿರಾರು ಕೋಟಿ ಇಟ್ಟುಕೊಂಡಿದ್ದಾರೆಂಬ ಯತ್ನಾಳ್ ಆರೋಪ: ಐಟಿ ತನಿಖ...
Home Front Page ಸಿಎಂ ಆಗಲು ಸಾವಿರಾರು ಕೋಟಿ ಇಟ್ಟುಕೊಂಡಿದ್ದಾರೆಂಬ ಯತ್ನಾಳ್ ಆರೋಪ: ಐಟಿ ತನಿಖೆಯಾಗಲಿ  ಎಂದ ಡಿಸಿಎಂ ಡಿಕೆ...

ಸಿಎಂ ಆಗಲು ಸಾವಿರಾರು ಕೋಟಿ ಇಟ್ಟುಕೊಂಡಿದ್ದಾರೆಂಬ ಯತ್ನಾಳ್ ಆರೋಪ: ಐಟಿ ತನಿಖೆಯಾಗಲಿ  ಎಂದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಸೆಪ್ಟೆಂಬರ್ 30,2024 (www.justkannada.in): ಕೆಲವರು ಸಿಎಂ ಆಗಲು ಸಾವಿರಾರು ಕೋಟಿ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಯತ್ನಾಳ್​ ಹೇಳಿಕೆ ಬಗ್ಗೆ ನಮಗೂ ಮಾಹಿತಿ ಇದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆಯಿಂದ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

ನಮ್ಮ ಸರ್ಕಾರವನ್ನು ಬೀಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಅಷ್ಟೊಂದು ಹಣ ಎಲ್ಲಿಂದ ಬಂತು? ಎಲ್ಲದರ ಬಗ್ಗೆ ಆದಾಯ ತೆರಿಗೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿ. ಈ ಬಗ್ಗೆ ನಾವು ಕೂಡ ನಮ್ಮ ಲೀಗಲ್ ಟೀಂ ಜೊತೆ ಚರ್ಚೆ ನಡೆಸಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಯತ್ನಾಳ್ ಹೇಳಿಕೆ ಕುರಿತು ಚರ್ಚಿಸಲು ​ಕಾಂಗ್ರೆಸ್ ಕಾನೂನು ತಂಡದ ಸಭೆ ಕರೆದಿದ್ದೇನೆ. 1,200 ಕೋಟಿ ರೂಪಾಯಿ ರೆಡಿಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಕಡೆಯಿಂದ ಈ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ. ಇದು ತೆರಿಗೆ ಇಲಾಖೆ ಹಾಗೂ ಇಡಿ (ಜಾರಿ ನಿರ್ದೇಶನಾಲಯ) ತನಿಖೆಯ ವ್ಯಾಪ್ತಿಗೆ ಬರುವ ವಿಚಾರ. ದೂರು ನೀಡುವ ಸಂಬಂಧ ಇಂದು ಚರ್ಚೆ  ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸಿಎಂ ಆಗಲು ಸಾವಿರಾರು ಕೋಟಿ ಇಟ್ಟುಕೊಂಡಿದ್ದಾರೆಂಬ ಯತ್ನಾಳ್ ಆರೋಪ VTU TOP BANNER 04

Key words: Basanagowda patil Yatnal, DCM DK Shivakumar, IT