Tuesday, August 4, 2026

BDA Apartments

Home Front Page ‘KSOU’ ನಿಂದ ಆಕಾಶವಾಣಿಯಲ್ಲಿ ಬಾನುಲಿ ಕಾರ್ಯಕ್ರಮ ಪ್ರಾರಂಭ.

‘KSOU’ ನಿಂದ ಆಕಾಶವಾಣಿಯಲ್ಲಿ ಬಾನುಲಿ ಕಾರ್ಯಕ್ರಮ ಪ್ರಾರಂಭ.

ಮೈಸೂರು,ಜನವರಿ,10,2024(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಆಕಾಶವಾಣಿಯಲ್ಲಿ ಬಾನುಲಿ ಕಾರ್ಯಕ್ರಮ ಪ್ರಾರಂಭ ಮಾಡಿದ್ದು. ಜನವರಿ 12ರಿಂದ 2025 ಜನವರಿ 3ರ ತನಕ 52ವಾರ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು  ಕುಲಪತಿ ಶರಣಪ್ಪ ವಿ ಹಲಸೆ ತಿಳಿಸಿದರು.

ಈ ಕುರಿತು ಮುಕ್ತ ವಿಶ್ವ ವಿದ್ಯಾನಿಲಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕುಲಪತಿ ಶರಣಪ್ಪ ವಿ ಹಲಸೆ, ಬಾನುಲಿ ಕಾರ್ಯಕ್ರಮದ ಮೂಲಕ ಪ್ರತಿಯೊಂದು ವಾರವು ಒಂದೊಂದು ವಿಭಾಗದ ಮುಖ್ಯಸ್ಥರು ಮಾಹಿತಿ ನೀಡಲಿದ್ದಾರೆ. ದೂರ ಶಿಕ್ಷಣವನ್ನ ಗ್ರಾಮೀಣ ಭಾಗಕ್ಕೂ ನೀಡಬೇಕೆಂಬುದು ಮುಕ್ತ ವಿಶ್ವ ವಿದ್ಯಾನಿಲಯದ ಆಶಯ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುಕ್ತ ವಿಶ್ವ ವಿದ್ಯಾನಿಲಯದ ಪ್ರಾದೇಶಿಕ ಕಚೇರಿ ತೆರೆಯಲು ಮುಂದಾಗುತ್ತಿದೆ.

ಕಳೆದ ಭಾರಿ ಅತಿ ಹೆಚ್ಚಿನ ವಿದ್ಯಾರ್ಥಿಗಳನ್ನ ನೋಂದಣಿ ಮಾಡಿಸಿದ್ದೆವು. 2023-24ನೇ ಸಾಲಿನ ಕೋರ್ಸ್ ಗಳಿಗೆ ಜನವರಿ 12ರಿಂದ ಪ್ರವೇಶಾತಿ ನೀಡಲಾಗುತ್ತಿದೆ ಎಂದು ಶರಣಪ್ಪ ವಿ ಹಲಸೆ ಮಾಹಿತಿ ನೀಡಿದರು.

Key words: Banuli program- started -Akashvani – KSOU