ಮೈಸೂರು,ಜುಲೈ,5,2025 (www.justkannada.in): ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಇಂದು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಬೆಳಗಿನ ಉಪಾಹಾರ ಸುತ್ತೂರು ಮಠದಲ್ಲೇ ಸೇವಿಸಿದ ಬಾನು ಮುಷ್ತಾಕ್ ಅವರು ಶ್ರೀಗಳ ಜೊತೆ ಪರಸ್ಪರ ಸಮಾಲೋಚನೆ ನಡೆಸಿ ಕೃತಿಗಳ ಬಗ್ಗೆ ಚರ್ಚಿಸಿದರು.
ಸುತ್ತೂರು ಮಠಕ್ಕೆ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಾನು ಮುಷ್ತಾಕ್, ಪ್ರಶಸ್ತಿ ಬಂದು ಎರಡು ತಿಂಗಳು ಆಯ್ತು. ಎಲ್ಲರೂ ಸಂಭ್ರಮ ಪಡುತ್ತಿದ್ದಾರೆ. ನನಗೂ ತುಂಬಾ ಖುಷಿ ಆಗಿದೆ. ಸುತ್ತೂರು ಮಠದವರು ನನಗೆ ಯಾವಾಗಲೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಈಗಲೂ ಕರೆದು ಸನ್ಮಾನ ಮಾಡಿದ್ದಾರೆ. ಎಲ್ಲರಿಗೂ ನನ್ನ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ ಎಂದರು.
ಕೂಸು ಹುಟ್ಟೋ ಮೊದಲೇ ಕುಲಾವಿ ಯಾಕೆ.?
ಈ ಬಾರಿ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಹ್ವಾನ ಸಾಧ್ಯತೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ವತಃ ಬಾನು ಮುಷ್ತಾಕ್, ಕೂಸು ಹುಟ್ಟೋ ಮೊದಲೇ ಕುಲಾವಿ ಯಾಕೆ.? ಈ ವಿಚಾರ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರ ಏನು ನಿರ್ಧಾರ ಮಾಡುತ್ತೋ ಗೊತ್ತಿಲ್ಲ ಎಂದರು.
ಪ್ರಶಸ್ತಿ ಬಂದಿದ್ದಕ್ಕೆ ಪ್ರಧಾನಿ ಮೋದಿ ವಿಶ್ ಮಾಡಿದ್ದರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಾನು ಮುಷ್ತಾಕ್, ಮೋದಿ ವಿಶ್ ಮಾಡಿಲ್ಲ. ವಿಶ್ ಮಾಡುತ್ತಾರೆ ಅಂತ ಅಂದುಕೊಂಡಿದ್ದೇನೆ ಎಂದರು.
Key words: Booker Prize winner, Banu Mushtaq, visits, Mysore, Suttur Math