ಬಜರಂಗದಳ ನಿಷೇಧ ಮಾಡುತ್ತೇವೆ ಅನ್ನೋದು ಹಾಸ್ಯಸ್ಪದ: ಬಿಜೆಪಿಯಿಂದ ಮಾತ್ರ ಅಭಿವೃದ್ದಿ ಎಂದ ಬಿವೈ ವಿಜಯೇಂದ್ರ.

ಶಿವಮೊಗ್ಗ, ಮೇ,4,2023(www.justkannada.in): ಕಾಂಗ್ರೆಸ್ ನವರು  ಬಜರಂಗದಳ ನಿಷೇಧ ಮಾಡುತ್ತೇವೆ ಅನ್ನೋದು ಹಾಸ್ಯಸ್ಪದ.  ಬಜರಂಗದಳ ದೇಶದ ಪರವಾಗಿ ಹೋರಾಟ ಮಾಡುವ ಸಂಘಟನೆ. ಕಾಂಗ್ರೆಸ್ ಅಧಿಕಾರಕ್ಕೆ  ಬಂದರೇ ಅಲ್ವಾ ನಿಷೇಧ ಮಾಡುವುದು ಎಂದು ಶಿಕಾರಿಪುರ  ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ಲೇವಡಿ ಮಾಡಿದರು.

ಶಿವಮೊಗ್ಗದಲ್ಲಿಇಂದು ಮಾತನಾಡಿದ ಬಿವೈ ವಿಜಯೇಂದ್ರ, ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಗೆ ಮಾತನಾಡಿದ್ದಾರೆಂದು ನೋಡಿದ್ದೇವೆ.  ಮೇ 13 ರಂದು ರಾಜ್ಯದ ಜನ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನ ಜನರು ನೋಡುತ್ತಿದ್ದಾರೆ. ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದೆ. ರಾಜ್ಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತಾ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗ ಮಾತ್ರ ನಾಢಿಗೆ ಒಳ್ಳೆಯದಾಗುತ್ತದೆ.  ರಾಜ್ಯವಷ್ಟೆ ಅಲ್ಲ ದೇಶವೇ ಈ ಫಲಿತಾಂಶ ಎದುರು ನೋಡುತ್ತಿದೆ. ಕಾಂಗ್ರೆಸ್ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ.  ಜೆಡಿಎಸ್ ಅತಂತ್ರ ಫಲಿತಾಂಶಕ್ಕಾಗಿ ಕಾಯುತ್ತಿದೆ. ರಾಜ್ಯದ ಅಭಿವೃದ್ದಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

Key words: Banning -Bajrang Dal –ridiculous- BY Vijayendra