ಬೆಂಗಳೂರು, ಆ.೧೬,೨೦೨೫ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ಕುಟುಂಬದ ಜತೆ ಚಿರತೆ ಸಫಾರಿಯಲ್ಲಿದ್ದ 12 ವರ್ಷದ ಬಾಲಕ ಚಿರತೆ ಜತೆಗಿನ ಆಕಸ್ಮಿಕ ಘರ್ಷಣೆಯಲ್ಲಿ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬಾಲಕನು ಜಾಲರಿಯಿಂದ ಕೂಡಿದ ನಾನ್-ಎಸಿ ಸಫಾರಿ ಬಸ್ಸಿನ ಹೊರಗೆ ತನ್ನ ಕೈಯನ್ನು ಇರಿಸಿದ್ದಾಗ, ಸಫಾರಿ ಆವರಣದಲ್ಲಿದ್ದ ಚಿರತೆಯೊಂದು ಬಸ್ಸಿನ ಮೇಲೆ ಹತ್ತಲು ಪ್ರಯತ್ನಿಸಿತು, ಮತ್ತು ಅದು ಬಾಲಕನ ತೋಳನ್ನು ತನ್ನ ಪಂಜದಿಂದ ಹಿಡಿದುಕೊಂಡಿತು. ಈ ವೇಳೆ ಚಿರತೆ ಉಗುರು ತರಚಿ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಚಿರತೆ ಬಾಲಕನ ಮೇಲೆ ದಾಳಿ ಮಾಡಿಲ್ಲ, ಮತ್ತು ಆ ಬಾಲಕನಿಗೂ ಚಿರತೆಯ ಚಲನವಲನಗಳ ಬಗ್ಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಪ್ರವಾಸಿಗರು ಈ ಬಗ್ಗೆ ಎಚ್ಚರಿದಾಗ, ಸಫಾರಿ ಬಸ್ ಅನ್ನು ತಕ್ಷಣವೇ ಮುಖ್ಯ ಕಚೇರಿಗೆ ತರಲಾಯಿತು. ಬಾಲಕನನ್ನು ಜಿಗಣಿಯಲ್ಲಿರುವ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.ಬಿಬಿಪಿ ಆಡಳಿತ ಮಂಡಳಿಯ ವಿರುದ್ಧ ವೈದ್ಯಕೀಯ-ಕಾನೂನು ಪ್ರಕರಣ ದಾಖಲಿಸಲಾಗಿದೆ.
ಕ್ಯಾಮೆರಾ ಸ್ಲಾಟ್‌ಗಳು ಸೇರಿದಂತೆ ಬಸ್‌ಗಳ ಕಿಟಕಿಗಳನ್ನು ಜಾಲರಿಯಿಂದ ಮುಚ್ಚಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎವಿ ಸೂರ್ಯ ಸೇನ್ ಹೇಳಿದ್ದಾರೆ. ಜತೆಗೆ ಎಸಿ ಅಲ್ಲದ ಸಫಾರಿ ಬಸ್‌ಗಳನ್ನು ನಿರ್ವಹಿಸುವ ಚಾಲಕರು ಜಾಗರೂಕರಾಗಿರಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದರು.
key words: Leopard, grabs boy’s hand, Bannerghatta safari van, boy injured, Bengaluru, BBP
SUMMARY:
Leopard grabs boy’s hand in Bannerghatta safari van; boy injured as a result. A 12-year-old boy, who was on a leopard safari with his family at the Bannerghatta Biological Park (BBP), was injured in an accidental collision with a leopard on Friday afternoon.