ಇಂದಿನಿಂದ 4 ದಿನಗಳ ಕಾಲ ಬ್ಯಾಂಕ್ ವಹಿವಾಟು ಬಂದ್…

ಬೆಂಗಳೂರು,ಮಾರ್ಚ್,13,2021(www.justkannada.in):  ಬ್ಯಾಂಕ್ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫಾರಮ್ಸ್ ಆಫ್ ಬ್ಯಾಂಕ್ ಇಂಡಿಯಾ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ ವಹಿವಾಟು ಬಂದ್ ಆಗಿದೆ.jk

ಬ್ಯಾಂಕ್ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ  ಮಾರ್ಚ್ 15,16 ರಂದು ಬ್ಯಾಂಕ್ ನೌಕರರ ಮುಷ್ಕರ ಕರೆ ನೀಡಲಾಗಿದೆ. ಇಂದು ಎರಡನೇ ಶನಿವಾರ, ನಾಳೆ ಭಾನುವಾರವಾಗಿದೆ. ಇನ್ನು ಮಾರ್ಚ್ 15  ಸೋಮವಾರ ಹಾಗೂ ಮಾರ್ಚ್ 16 ಮಂಗಳವಾರ ಬ್ಯಾಂಕ್ ನೌಕರರ ಮುಷ್ಕರಕ್ಕೆ ಕರೆ ನೀಡಲಾಗಿದೆ.

bank-staff-protest-4-days-bank-bandh
ಕೃಪೆ-internet

ಈ ಮೂಲಕ ನಾಲ್ಕು ದಿನಗಳ ಕಾಲ ಬ್ಯಾಂಕ್ ವಹಿವಾಟು ಬಂದ್ ಆಗಿದೆ. ಎರಡು ದಿನಗಳ ಕಾಲ ಬೃಹತ್ ಪ್ರತಿಭಟನೆಯಲ್ಲಿ 5ಸಾವಿರಕ್ಕೂ ಅಧಿಕ ನೌಕರರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Key words: Bank –staff-protest- 4 days – bank bandh