ಬ್ಯಾಂಕ್ ನಿಂದಲೇ ಅಡವಿಟ್ಟ ಚಿನ್ನ ಮೋಸ ಕೇಸ್: ಇಂದು ಕೂಡ ಬ್ಯಾಂಕ್ ನತ್ತ ಗ್ರಾಹಕರು, ಪರಿಶೀಲನೆ

ಮೈಸೂರು,ಡಿಸೆಂಬರ್,23,2025 (www.justkannada.in): ಮೈಸೂರಿನ ಹಿನಕಲ್ ಕೆನರಾ ಬ್ಯಾಂಕ್ ನಲ್ಲಿ ಚಿನ್ನ ಅಡಮಾನ ಇಟ್ಟ ಗ್ರಾಹಕರಿಗೆ ಮೋಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ  ಗ್ರಾಹಕರು ಬ್ಯಾಂಕಿನತ್ತ ಧಾವಿಸುತ್ತಿದ್ದು, ಅಡವಿಟ್ಟ ಚಿನ್ನ ಪರಿಶೀಲನೆ ಮಾಡಲಾಗುತ್ತಿದೆ.

ಗ್ರಾಹಕರೊಬ್ಬರು ಅಡಮಾನ ಇಟ್ಟ ಚಿನ್ನ ಬಿಡಿಸಿಕೊಂಡು ಮನೆಗೆ ತಂದಾಗ ಮೋಸ ಮಾಡಿದ್ದು ಬೆಳಕಿಗೆ ಬಂದಿತ್ತು. ಚಿನ್ನದ ತೂಕ ಒಂದೇ ಮಾದರಿಯಲ್ಲಿ ಇದ್ದರೂ ಚಿನ್ನದ ಸ್ವರೂಪದಲ್ಲಿ ಬದಲಾವಣೆಯಾಗಿತ್ತು. ಅನುಮಾನ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು . ಚಿನ್ನದ ಸರದಲ್ಲಿ ಇದ್ದ ಗುಂಡುಗಳ ಪ್ರಮಾಣದಲ್ಲಿ‌ ವ್ಯತ್ಯಾಸವಾಗಿತ್ತು. ಅಡಮಾನ ಇಟ್ಟಾಗ 85 ಗುಂಡು ಇದ್ದ ಸರದಲ್ಲಿ 77 ಗುಂಡುಗಳು ಇರೋದು ಕಂಡು ಗ್ರಾಹಕ ಕಕ್ಕಾಬಿಕ್ಕಿಯಾಗಿದ್ದರು.

ಈ ಮಧ್ಯೆ ಚಿನ್ನದ ಸರದಲ್ಲಿ ಕೊಂಡಿಗಳನ್ನು ಕಟ್ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು ಸರ ಧರಿಸಲು ಆಗದಿದ್ದಾಗ ಗ್ರಾಹಕರು ಪರಿಶೀಲನೆ ಮಾಡಿದ್ದು ಇದೀಗ ತಮ್ಮ ಚಿನ್ನವನ್ನು ವಾಪಸ್ ಕೊಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಗ್ರಾಹಕರಿಗೆ ತರಾಟೆ ತೆಗದುಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಬ್ಯಾಂಕ್ ಬಾಗಿಲು ಮುಚ್ಚಿ ಒಬ್ಬ ಒಬ್ಬರನ್ನು ಕರೆದು ಚಿನ್ನ ಪರಿಶೀಲನೆ ಮಾಡುತ್ತಿದ್ದಾರೆ. ಯಾರಿಂದ ಸಮಸ್ಯೆಯಾಗಿದೆ ಹೇಗೆ ಆಗಿದೆ ಪರಿಶೀಲನೆ ಮಾಡಿ ಎಲ್ಲರಿಗೂ ನ್ಯಾಯ ಸಿಗತ್ತೆ ಸಮಯ ಕೊಡಿ ಎಂದು ಬ್ಯಾಂಕ್ ಮ್ಯಾನೇಜ್ ಮೆಂಟ್ ತಿಳಿಸಿದೆ.

Key words: Bank, gold, fraud case, Mysore, customers