ಮಾರ್ಚ್’ನಲ್ಲಿ ಮತ್ತೆ ಬ್ಯಾಂಕ್ ನೌಕರರ ಮುಷ್ಕರ ಸರಣಿ

ನವದೆಹಲಿ, ಫೆಬ್ರವರಿ 08, 2020 (www.justkannada.in): ಮಾರ್ಚ್ 11 ರಿಂದ 13 ರವರೆಗೆ 3 ದಿನ ಮತ್ತೆ ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಯಲಿದೆ.

ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್‌ಐ) ಮತ್ತು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರಕಾರ, ಭಾರತೀಯ ಬ್ಯಾಂಕುಗಳ ಸಂಘದೊಂದಿಗೆ ವೇತನ ಪರಿಷ್ಕರಣೆ ಮಾತುಕತೆಯ ನಂತರ ಮಾರ್ಚ್ 11 ರಿಂದ 13 ರವರೆಗೆ 3 ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರವನ್ನು ನಡೆಸಲಾಗುತ್ತದೆ.

ವೇತನ ಪರಿಷ್ಕರಣೆ ಕುರಿತು ಭಾರತೀಯ ಬ್ಯಾಂಕುಗಳ ಸಂಘ(ಐಬಿಎ)ಯೊಂದಿಗೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ಮಾಡಲಾಗಿದ್ದು. ಇದೀಗ ವೇತನ ಹೆಚ್ಚಳದ ಜೊತೆಗೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಬೇಡಿಕೆಯಿಟ್ಟು ಮೂರು ದಿನಗಳ ಮುಷ್ಕರ ನಡೆಸುವುದಾಗಿ ಉದ್ಯೋಗಿಗಳ ಸಂಘಟನೆ ಎಚ್ಚರಿಸಿದೆ.