2ನೇ ದಿನವೂ ಮುಂದುವರೆದ ಬ್ಯಾಂಕ್ ನೌಕರರ ಮುಷ್ಕರ….

ಮೈಸೂರು,ಮಾರ್ಚ್,16,2021(www.justkannada.in): ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ನಡೆಯುತ್ತಿರುವ ಬ್ಯಾಂಕ್ ನೌಕರರ ಮುಷ್ಕರ ಎರಡನೇ ದಿನವೂ ಮುಂದುವರೆದಿದೆ.

ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ  ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆ ನಿನ್ನೆಯಿಂದ ಎರಡು ದಿನಗಳ ಕಾಲ ಬ್ಯಾಂಕ್ ನೌಕರರ ಮುಷ್ಕರಕ್ಕೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಾಂತ ವಿವಿಧ ಬ್ಯಾಂಕ್ ಸಂಘಟನೆಗಳ 10ಲಕ್ಷಕ್ಕೂ ಹೆಚ್ಚು ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು ಇದರಿಂದಾಗಿ ಬ್ಯಾಂಕ್ ನ ಎಲ್ಲಾ ವಹಿವಾಟು ಬಂದ್ ಆಗಿದೆ.

ಇನ್ನು ಮೈಸೂರಿನ ಟಿ ಕೆ ಲೇಔಟ್ ನಲ್ಲಿರುವ SBI ವಲಯ ಕಚೇರಿ ಬಳಿಯ ಬ್ಯಾಂಕ್ ನೌಕರರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಸಹ ಧರಣಿಗೆ ಸಜ್ಜಾಗಿದ್ದಾರೆ.  ಇನ್ನೊಂದೆಡೆ ನಜರಬಾದ್ ಕೆನರಾ ಬ್ಯಾಂಕ್ ವಲಯ ಕಚೇರಿ ಆವರಣದಲ್ಲೂ ಪ್ರತಿಭಟನೆ ನಡೆಸಲಾಗುತ್ತದೆ.Bank strike today and tomorrow

ಮೈಸೂರಲ್ಲಿ 9 ಬ್ಯಾಂಕ್ ನೌಕರರ ಸಂಘಟನೆಯ 500ಕ್ಕೂ ಹೆಚ್ಚು ನೌಕರರು ಇಂದು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

Key words: Bank- employee- strike – continued – 2nd day.