ಢಾಕಾ,ನವೆಂಬರ್,17,2025 (www.justkannada.in): ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಗಲ್ಲುಶಿಕ್ಷೆ ಪ್ರಕಟಿಸಿದೆ.
ಮಾನವೀಯತೆಯ ವಿರುದ್ಧದ ಅಪರಾಧಗಳ ಪ್ರಕರಣದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿ ಐಸಿಟಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯವು ಹಸೀನಾ ಅವರನ್ನು ಮೂರು ಆರೋಪಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದೆ. 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ದಂಗೆಯ ಮೇಲೆ ಮಾರಕ ಕ್ರಮ ಕೈಗೊಳ್ಳಲು ಆದೇಶಿಸಿದ್ದಕ್ಕಾಗಿ ಅವರು ತಪ್ಪಿತಸ್ಥರೆಂದು ಘೋಷಿಸಿದೆ.
2024ರಲ್ಲಿ ವಿದ್ಯಾರ್ಥಿಗಳ ದಂಗೆ ಹತ್ತಿಕ್ಕಲು ಹಿಂಸಾಚಾರ ನಡೆಸಿದ ಆರೋಪ ಶೇಖ್ ಹಸೀನಾ ಮೇಲಿದ್ದು ಹಿಂಸಾಚಾರದಲ್ಲಿ 1400 ವಿಧ್ಯಾರ್ಥಿಗಳು ಸಾವನ್ನಪ್ಪಿದ್ದರು. ಇದಕ್ಕೆ ಅಂದಿನ ಶೇಖ್ ಹಸೀನಾ ಅವರ ಸರ್ಕಾರ ಕೈಗೊಂಡ ಕ್ರಮವೇ ಕಾರಣ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
Key words: Bangladesh, Ex-Prime Minister, Sheikh Hasina, sentenced to death







