ಹೈಟೆನ್ಷನ್ ವಿದ್ಯುತ್ ತಂತಿಗೆ ಮತ್ತೊಬ್ಬ ಬಲಿ: 4 ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ ಸಾವನ್ನಪ್ಪಿದ ಸಂಖ್ಯೆ 7ಕ್ಕೆ ಏರಿಕೆ

ಬೆಂಗಳೂರು:ಜೂ-1:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಘಟನೆ ಮತ್ತಿಕೆರೆಯ ಮಂಜುನಾಥ ನಗರದಲ್ಲಿ ನಡೆದಿದೆ. ಈ ಮೂಲಕ ನಾಲ್ಕು ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ ಸಾವನ್ನಪ್ಪಿದ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಸತೀಶ್ (23) ಮೃತ ಕಾರ್ಮಿಕ. ಸತೀಶ್ ಮಂಜುನಾಥ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಮೇ 27ರಂದು ಸತೀಶ್ ಮೊದಲನೇ ಮಹಡಿಯಲ್ಲಿ ಕಾಂಕ್ರೀಟ್ ಹಾಕುತ್ತಿದ್ದರು. ಈ ವೇಳೆ ಕಟ್ಟಡದಲ್ಲಿ ಹಾದುಹೋಗಿದ್ದ ಹೈಟೆನ್ಷನ್ ವೈರ್ ಗೆ ಕಬ್ಬಿಣದ ಸರಳುಗಳು ತಗುಲಿದೆ. ಪರಿಣಾಮ ಸತೀಶ್‍ಗೆ ವಿದ್ಯುತ್ ಸ್ಪರ್ಶಿಸಿ ಶೇ.80 ಸುಟ್ಟು ಗಾಯಗೊಂಡಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಸತೀಶ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಇಂದು ಮೃತಪಟ್ಟಿದ್ದಾರೆ.

ಕಟ್ಟಡ ಮಾಲೀಕ ಜಯಕುಮಾರ್ ಹಾಗೂ ಮೇಸ್ತ್ರಿ ರಾಮಚಂದ್ರ ಇಬ್ಬರನ್ನು ಬಸವೇಶ್ವರನಗರ ಪೊಲೀಸರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರ ವಿರುದ್ಧ ನಿರ್ಲಕ್ಷ್ಯದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹೈಟೆನ್ಷನ್ ವಿದ್ಯುತ್ ತಂತಿಗೆ ಮತ್ತೋಬ್ಬ ಬಲಿ: 4 ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ ಸಾವನ್ನಪ್ಪಿದ ಸಂಖ್ಯೆ 7ಕ್ಕೆ ಏರಿಕೆ
Bangalore,man died, high tension wire