ಕುಡಿದುಬಂದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡು ಪತ್ನಿಗೆ ಚಾಕು ಇರಿದ ಪತಿ ಮಹಾಶಯ

ಬೆಂಗಳೂರು:ಜೂ-24:(www.justkannada.in) ಕಂಠಪೂರ್ತಿ ಕುಡಿದು ಬಂದ ಪತಿಯನ್ನು ಪ್ರೆಶ್ನೆ ಮಾಡಿದ್ದಕ್ಕೆ ಕೋಪಗೊಂದ ಪತಿಮಹಾಶಯ ಪತ್ನಿಗೆ ಚಾಕುವಿನಿಮ್ದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರದೀಪ್ ಪತ್ನಿಗೆ ಚಾಕು ಇರಿದ ಆರೋಪಿ. ಪ್ರದೀಪ್ ಕುಡಿಬಂದಿದ್ದನ್ನು ಪತ್ನಿ ತಪಸ್ವಿನಿ ಪ್ರಶ್ನೆ ಮಾಡಿದ್ದಾಳೆ. ಕುಡಿದ ಮತ್ತಿನಲ್ಲಿ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಮದ್ಯದ ಅಮಲಿನೊಂದಿಗೆ ಕೋಪ ವಿಕೋಪಕ್ಕೆ ತಿರುಗಿ ಪ್ರದೀಪ್ ತನ್ನ ಪತ್ನಿಯ ಕುತ್ತಿಗೆಯನ್ನು ಚಾಕುವಿನಿಂದ ಇರಿದುಬಿಟ್ಟಿದ್ದಾನೆ.

ಗಂಭೀರವಾಗಿ ಗಾಯಗೊಂಡ ತಪಸ್ವಿನಿ, ಸಾವು-ಬದುಕಿನ ಹೋರಾಟದಲ್ಲೇ ಅಣ್ಣನ ಮನೆ ಬಾಗಿಲು ತಟ್ಟಿದ್ದಾಳೆ. ತಕ್ಷಣ ಆಕೆಯ ಅಣ್ಣ ತಪಸ್ವಿನಿಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಪ್ರದೀಪ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ತಪಸ್ವಿನಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಹಣಕಾಸಿನ ತೊಂದರೆ ಜತೆಗೆ ಕುಡಿದು ಬರುವ ಪತಿಯನ್ನು ತಪಸ್ವಿನಿ ಪ್ರಶ್ನಿಸುತ್ತಿದ್ದಳು. ಇದೇ ಕಾರಣಕ್ಕೆ ಇಬ್ಬರ ನದುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.

ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕುಡಿದುಬಂದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡು ಪತ್ನಿಗೆ ಚಾಕು ಇರಿದ ಪತಿ ಮಹಾಶಯ
Bangalore,husband,stabs,wife