ವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್: ಮೂವರು ಸ್ನೇಹಿತರು ಸ್ಥಳದಲ್ಲೇ ಸಾವು

ಬೆಂಗಳೂರು:ಮೇ-6:(www.justkannada.in) ವೀಕೆಂಡ್ ಮೋಜಿನ ಜತೆ ಕ್ರೇಜ್ ಗಾಗಿ ವೇಗವಾಗಿ ಬೈಕ್ ಓಡಿಸಿ ಡಿವೈಡರ್ ಗೆ ಹೋಗಿ ಡಿಕ್ಕಿಹೊಡೆದ ಪರಿಣಾಮ ಮೂವರು ಯುವಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆ ಬಳಿ ತಡರಾತ್ರಿ ಈ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಮೂವರು ಇಂಜಿನಿಯರ್​ಗಳು ಮೃತಪಟ್ಟಿದ್ದಾರೆ. ಶ್ರೀನಾಥ್​, ಅನಿಲ್​ ಮತ್ತು ಕಾರ್ತಿಕ್​ ಮೃತಪಟ್ಟ ಯುವಕರು.

ಶ್ರೀನಾಥ್​ ಹಾಗೂ ಕಾರ್ತಿಕ್​ ಬೆಂಗಳೂರಿನಲ್ಲಿ ವಾಸವಿದ್ದರು. ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದ ಅನಿಲ್​ ನನ್ನು ಭೇಟಿಯಾಗಲೆಂದು ಶ್ರೀನಾಥ್​ ಮತ್ತು ಕಾರ್ತಿಕ್​ ತೆರಳಿದ್ದರು. ರಾತ್ರಿ ಮೂವರೂ ಸ್ನೇಹಿತರು ಒಂದೇ ಬೈಕ್​ನಲ್ಲಿ ತ್ರಿಬಲ್​ ರೈಡಿಂಗ್​ ತೆರಳುತ್ತಿದ್ದಾಗ, ವೇಗವಾಗಿ ತೆರಳುತ್ತಿದ್ದ ಬೈಕ್​ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯುವಕರ ತಲೆಗೆ ಗಂಭೀರ ಗಾಯವಾಗಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆಲ್ಮೆಟ್ ಧರಿಸಿದ್ದರೆ ತಲೆಯಭಾಗದಲ್ಲಿ ಗಂಭೀರವಾಗಿ ಏಟಾಗುತ್ತಿರಲಿಲ್ಲ. ಹೆಲ್ಮೆಟ್ಟಿಲ್ಲದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತಪಟ್ಟ ಕಾರ್ತಿಕ್​ ಮದುವೆ ನವೆಂಬರ್​ನಲ್ಲಿ ನಿಶ್ಚಯವಾಗಿತ್ತು ಮತ್ತು ಅನಿಲ್​ ಅವರ ನಿಶ್ಚಿತಾರ್ಥ ಗುರುವಾರ ನಡೆಯಬೇಕಿತ್ತು.

ವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್: ಮೂವರು ಸ್ನೇಹಿತರು ಸ್ಥಳದಲ್ಲೇ ಸಾವು
Bangalore,bike accident, 3 friends dead