Thursday, August 13, 2026

BDA Apartments

Home Crime ಕಾರು ಅಡ್ಡಗಟ್ಟಿ ವ್ಯಕ್ತಿ ತಲೆಗೆ ಗನ್ ಇಟ್ಟು ಬೆದರಿಸಿ ದರೋಡೆ ಮಾಡಿದ ದುಷ್ಕರ್ಮಿಗಳು….

ಕಾರು ಅಡ್ಡಗಟ್ಟಿ ವ್ಯಕ್ತಿ ತಲೆಗೆ ಗನ್ ಇಟ್ಟು ಬೆದರಿಸಿ ದರೋಡೆ ಮಾಡಿದ ದುಷ್ಕರ್ಮಿಗಳು….

ಬೆಂಗಳೂರು,ಜ,21,2020(www.justkannada.in): ದುಷ್ಕರ್ಮಿಗಳು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಶೂಟ್​ ಮಾಡುವುದಾಗಿ ಬೆದರಿಸಿ ಹಣದ ದೋಚಿರುವ ಘಟನೆ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ.

ಗಿರೀಶ್​ ಎಂಬುವವರ ಬಳಿಯೇ ದರೋಡೆ ಮಾಡಿರುವುದು. ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಗಿರೀಶ್ ರಾತ್ರಿ ಪಾಳಿ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ​ ಕಾರ್​ನಲ್ಲಿ ಬಂದ ದುಷ್ಕರ್ಮಿಗಳ ತಂಡ ಗಿರೀಶ್ ಕಾರಿಗೆ ಅಡ್ಡ ಬಂದಿದ್ದಾರೆ.  ನಂತರ ಗಿರೀಶ್ ಹಣೆಗೆ ಗನ್​  ಇಟ್ಟು ಬೆದರಿಸಿ ಕಾರು ಮೊಬೈಲ್, 16,500 ರೂ ಹಣವನ್ನ ದೋಚಿ ಪರಾರಿಯಾಗಿದ್ದಾರೆ.

ಇದಾದ ನಂತರ ಗಿರೀಶ್ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.  ವಿಷಯ ತಿಳಿದ ಪೀಣ್ಯ ಮತ್ತು ರಾಜಗೋಪಾಲನಗರ ಪೊಲೀಸರು ಕಳ್ಳತನ ಮಾಡಿದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕಾರು ಚೇಸ್ ಮಾಡುವ ದರೋಡೆಕೋರರ ಗ್ಯಾಂಗ್​ ಸೋಲದೇವನಹಳ್ಳಿ ಬಳಿ ಕಾರು ಬಿಟ್ಟು ಪರಾರಿಯಾಗಿದ್ದಾರೆ , ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.

 

Key words: Bangalore- threatened – gun -robbed – man