ಟೆಕ್ ಶೃಂಗದಲ್ಲಿ ಪೋಸ್ಟರ್ ಪ್ರದರ್ಶನ: ಹೊಸ ಆಲೋಚನೆಗಳ ಅನಾವರಣ

 

ಬೆಂಗಳೂರು, ನ18, 2021 : (www.justkannada.in news ) ಇದೀಗ ನಡೆದಿರುವ 24ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗ-2021ರ ಅಂಗವಾಗಿ ಪೋಸ್ಟರ್ ಪ್ರದರ್ಶನವನ್ನೂ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಇಲ್ಲಿ ತಮ್ಮ ಹೊಸ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಸ್ಟೈರೋಫೋಮ್ ಬದಲು ಬಳಸಬಹುದಾದ ಹುಲ್ಲಿನಿಂದ ತಯಾರಿಸಿದ ಬಯೋಡಿಗ್ರೇಡಬಲ್ ಪ್ಯಾಕಿಂಗ್‌ ಸಾಮಗ್ರಿ, ವೈದ್ಯಕೀಯ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಬಹುದಾದ ಆನ್ಲೈನ್ ವ್ಯವಸ್ಥೆ, ಮನೆಗಳಲ್ಲಿ ಬಳಸಬಹುದಾದ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ, ಹಣ್ಣು ತರಕಾರಿಗಳನ್ನು ಶೇಖರಿಸಿಡಲು ವಿದ್ಯುತ್ ಬಳಸದ ವಿಧಾನ, ಡೀಪ್‌ಫೇಕ್ ವೀಡಿಯೋಗಳನ್ನು ಪತ್ತೆಮಾಡುವ ತಂತ್ರ, ಹೀಗೆ ಇಲ್ಲಿ ಹಲವಾರು ಆಲೋಚನೆಗಳನ್ನು ನಾವು ನೋಡಬಹುದು.

ಕೋವಿಡ್ ಜಾಗತಿಕ ಸೋಂಕಿನ ಸನ್ನಿವೇಶದಲ್ಲಿ ರೂಪುಗೊಂಡಿರುವ ಹಲವು ಆಲೋಚನೆಗಳೂ ಇಲ್ಲಿ ಪ್ರದರ್ಶಿತವಾಗಿವೆ. ಅಂದಹಾಗೆ ಜೇಬಿನಲ್ಲಿ ಕೊಂಡೊಯ್ಯಬಹುದಾದ ಬಿಯರ್ ಸ್ಯಾಶೆಗಳ ಪರಿಕಲ್ಪನೆಯೂ ಇಲ್ಲಿದೆ. ಈ ಸ್ಯಾಶೆಯಲ್ಲಿರುವ ಬಿಯರ್ ಕಾನ್ಸನ್ಟ್ರೇಟ್ ಅನ್ನು ಸೋಡಾ ಜೊತೆ ಬೆರೆಸಿಕೊಂಡರೆ ಬೇಕಾದ ಕಡೆ ಬಿಯರ್ ಸಿದ್ಧವಾಗುತ್ತದಂತೆ!

 

key words : bangalore-tech-summit-BTS-karnataka