ಸಂಚಾರಿ ವಿಜಯ್ ಇನ್ನೂ ಜೀವಂತ : ಅಪೋಲೊ ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ.

ಬೆಂಗಳೂರು, ಜೂ.14, 2021 : (www.justkannada.in news) : ನಟ ಸಂಚಾರಿ ವಿಜಯ್ ಬಗ್ಗೆ ಇಲ್ಲಸಲ್ಲದ ಸುದ್ದಿ ಬರ್ತಿದೆ. ಅವರ ಬಗ್ಗೆ ಸುಳ್ಳು ಸುದ್ದಿ ಹರಿದಾಡ್ತಿದೆ. ಹೀಗಾಗಿ ನಾನೇ ಬಂದು ಹೇಳುತ್ತಿದ್ದೇನೆ. ಸಂಚಾರಿ ವಿಜಯ್ ಇನ್ನೂ ಅವರು ಜೀವಂತವಾಗಿದ್ದಾರೆ.jk
ಅಪೋಲೊ ವೈದ್ಯ ಅರುಣ್ ನಾಯ್ಕ್ ಹೇಳಿಕೆ.
ಸಂಚಾರಿ ವಿಜಯ್ ಅವರಿಗೆ ಬ್ರೈನ್ ಫೆಲ್ಯೂರ್ ಆಗಿದೆ, ಆದರೆ ಇನ್ನು ಉಸಿರಾಡುತ್ತಿದ್ದಾರೆ. ಮೊದಲ ಆ್ಯಪ್ನಿಯಾ ಟೆಸ್ಟ್ ಮಾಡಿದ್ದೇವೆ. ಎರಡನೇ ಆ್ಯಪ್ನಿಯಾ ಟೆಸ್ಟ್ ಮಾಡಬೇಕು. ಅದಾದ ನಂತರವೇ ಬ್ರೈನ್ ಡೆಡ್ ಆಗಿದೆಯಾ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಅಲ್ಲಿಯವರೆಗೆ ಅವರು ನಿಧನ ಎಂದು ಹೇಳಲು ಸಾಧ್ಯವಿಲ್ಲ. ಇನ್ನೈದಾರು ತಾಸಿನ ನಂತರ ಇದು ಖಚಿತವಾಗುತ್ತದೆ.
ಅವರ ಕುಟುಂಬದವರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ. ಬ್ರೈನ್ ಡೆಡ್ ನಂತರ ಈ ಬಗ್ಗೆ ಏನು ಮಾಡುವುದು ಎಂಬುದನ್ನು ನಿರ್ಧರಿಸಲಾಗುವುದು. ಇದಾದ ನಂತರವೇ ಅಂಗಾಂಗ ದಾನ ಮಾಡಬೇಕಾಗುತ್ತದೆ. ಅಗತ್ಯವಿರುವ ರೋಗಿಗೆ ಅಂಗಾಂಗ ಕಸಿ ಮಾಡಲಾಗುತ್ತದೆ. ಅಪೋಲೊ ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ.
ಈಗಾಗಲೇ ನಟ ಸಂಚಾರಿ ವಿಜಯ್ ನಿಧನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಚಿವರ, ಶಾಸಕರ ಹಾಗೂ ಇತರೆ ಸೆಲೆಬ್ರಿಟಿಗಳ ಸಂತಾಪ ಸಂದೇಶಗಳು ಸಾಮಾಜಿಕ ಮಾಧ್ಯಮ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರು ಈ ಸ್ಪಷ್ಟನೆ ನೀಡಿದ್ದಾರೆ.

key words : bangalore-sanchari-vijay-appolo-hospital-clarrification