ಕಾರು ಅಡ್ಡಗಟ್ಟಿ ಮಹಿಳೆ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು.

ಆನೇಕಲ್,ಡಿಸೆಂಬರ್,28,2021(www.justkannada.in):  ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಮಹಿಳೆಯನ್ನು ಬರ್ಬರ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಿಣಿ ಬಳಿ ನಡೆದಿದೆ.

ಜಿಗಣಿ ನಿವಾಸಿ ಅರ್ಚನಾರೆಡ್ಡಿ  ಹತ್ಯೆಯಾದ ಮಹಿಳೆ. ನವೀನ್, ಸಂತೋಷ್ ಎಂಬುವವರು ಅರ್ಚನಾರೆಡ್ಡಿಯನ್ನು  ಕೊಲೆ ಮಾಡಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದೆ. ಅರ್ಚನಾ ಮೊದಲ ಪತಿ ಬಿಟ್ಟು 2ನೇ ಪತಿ ನವೀನ್ ಜೊತೆ ವಾಸವಿದ್ದರು.  ಈ ನಡುವೆ  ಚೆನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಗಲಾಟೆ ನಡೆದಿದ್ದು ಹೀಗಾಗಿ ಇತ್ತೀಚೆಗೆ ನವೀನ್  ಬಿಟ್ಟು  ಅರ್ಚನಾ ದೂರವಿದ್ದರು.  ಹೀಗಾಗಿ  ನವೀನ್ ತನ್ನ ಪತ್ನಿ ಅರ್ಚನಾರನ್ನ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಕಾರು ಚಾಲಕ ಮತ್ತು ಅರ್ಚನಾ ಮಗ ಅರವಿಂದ್ ಪಾರಾಗಿದ್ದು, ಈ ಕುರಿತು ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bangalore-murder-women-car