ಸಂಕಷ್ಟದಲ್ಲಿರುವ ವಕೀಲರ ನೆರವಿಗೆ ಬರುವಂತೆ ಸರ್ಕಾರಕ್ಕೆ ಎ.ಪಿ.ರಂಗನಾಥ್ ಆಗ್ರಹ…

ಬೆಂಗಳೂರು,ಮೇ,19,2021(www.justkannada.in): ಕೊರೋನಾ ಹಿನ್ನೆಲೆ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ನೆರವಿಗೆ ಧಾವಿಸುವಂತೆ ರಾಜ್ಯ ಸರ್ಕಾರಕ್ಕೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ ಆಗ್ರಹಿಸಿದ್ದಾರೆ. Bangalore Lawyers Association-president-AP Ranganath -urges - government

ಈ ಸಂಬಂಧ ಸಿಎಂ ಬಿಎಸ್ ವೈಗೆ ಮನವಿ ಮಾಡಿರುವ ಎ.ಪಿ ರಂಗನಾಥ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೋನಾ ಲಾಕ್‌ಡೌನ್ ಪರಿಣಾಮವಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ನೀಡುತ್ತಾರೆ ಎಂಬ ಭರವಸೆಯನ್ನು ಹುಸಿಗೊಳಿಸಿದ್ದಾರೆ. ಬೆಂಗಳೂರು ವಕೀಲರ ಸಂಘ ಸರ್ಕಾರಕ್ಕೆ ವಕೀಲರನ್ನು ಕೂಡ ಮುಂಚೂಣಿ ವಾರಿಯರ್ಸ್ ಎಂದು ಪರಿಗಣಿಸಿ, ಮೃತಪಟ್ಟ ಕುಟುಂಬಗಳಿಗೆ 30 ಲಕ್ಷ ಪರಿಹಾರವನ್ನು ನೀಡಬೇಕೆಂದು ಮನವಿಯನ್ನು ಸಲ್ಲಿಸಿತ್ತು. ಅಲ್ಲದೇ ಕಳೆದ ವರ್ಷದ ಲಾಕ್‌ ಡೌನ್ ನಿಂದಾಗಿ ನ್ಯಾಯಾಲಯದ ಕಲಾಪಗಳು ನಡೆಯದ ಕಾರಣ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.bangalore-lawyers-association-president-ap-ranganath-urges-government

ಪ್ಯಾಕೇಜ್ ಘೋಷಣೆ ಮಾಡಲು ಸಲ್ಲಿಸಿದ್ದ ಮನವಿಗೂ ಕೂಡ ಸೂಕ್ತ ಸ್ಪಂದನೆ ನೀಡಿಲ್ಲ. ಈಗ ಮತ್ತೊಂದು ಅವಧಿಯ ಲಾಕ್‌ ಡೌನ್ ಜೊತೆಗೆ ಪ್ರತಿದಿನ ಸೋಂಕಿಗೆ ತುತ್ತಾಗಿ ವಕೀಲರು ಸಾವನ್ನಪ್ಪುತ್ತಿದ್ದಾರೆ.  ಆದರೂ ಸರ್ಕಾರ ವಕೀಲರ ನೆರವಿಗೆ ಧಾವಿಸುತ್ತಿಲ್ಲ. ಬಹುಶಃ ಸರ್ಕಾರಕ್ಕೆ ನ್ಯಾಯಾಂಗದ ಇತ್ತೀಚಿನ ಜನಪರವಾದ ನಿಲುವುಗಳಿಂದ ವಕೀಲ ಸಮುದಾಯದ ಕುರಿತು ತಾತ್ಸಾರ ಭಾವನೆ ಮೂಡಿರುವಂತಿದೆ. ಸರ್ಕಾರ ತಕ್ಷಣವೇ ವಕೀಲರ ಸಂಘದ ಬೇಡಿಕೆಗಳನ್ನು ಈಡೇರಿಸಿ ಎಂದು ಎಪಿ ರಂಗನಾಥ್ ಆಗ್ರಹಿಸಿದ್ದಾರೆ.

Key words: Bangalore Lawyers Association-president-AP Ranganath -urges – government