ರಾಜ್ಯದಲ್ಲಿ ಸಾವಿರದ ಗಡಿ ದಾಟಿದ ಕರೋನಾ ಸೊಂಕಿತರ ಸಂಖ್ಯೆ….

 

ಬೆಂಗಳೂರು, ಮೇ 15, 2020 : (www.justkannada.in news) : ರಾಜ್ಯದಲ್ಲಿ ಕರೋನಾ ಸೊಂಕಿಗೆ ಸಿಲುಕಿದವರ ಸಂಖ್ಯೆ ಶುಕ್ರವಾರ 1032 ಕ್ಕೆ ಏರಿಕೆಯಾಗಿದೆ.

ಕೊರೊನಾ ಭೀತಿ ಕಾರಣ, ರಾಜ್ಯದಲ್ಲಿ ಸಂಪೂರ್ಣ ಅಲರ್ಟ್ ಘೋಷಿಸಲಾಗಿತ್ತು. ಆರಂಭದಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ಏರಿಕೆಯಾಗಿತ್ತಾದರು ಆನಂತರದ ಕಠಿಣ ಕ್ರಮಗಳಿಂದ ಸೊಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ ವಿಪರ್ಯಾಸ ಎಂದರೆ ಇದೀಗ ಸೊಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

bangalore-karnataka-covid.19-corona-1000-positive

ರಾಜ್ಯ ಸರಕಾರದ ಕೋವಿಡ್ 19 ಬುಲೆಟಿನ್ ಪ್ರಕಾರ ಇಂದು ಒಂದೇ ದಿನ ರಾಜ್ಯದಲ್ಲಿ 45 ಹೊಸ ಪ್ರಕರಣಗಳು ದೃಢಪಟ್ಟಿವೆ.
ಈ ಪೈಕಿ ಬೆಂಗಳೂರು 13, ಬೀದರ್ 03, ಕೋಲಾರ 01, ಚಿತ್ರದುರ್ಗ 02, ಶಿವಮೊಗ್ಗ 01, ಹಾಸನ 03, ಬಾಗಲಕೋಟೆ 01, ದಕ್ಷಿಣಕನ್ನಡ 16, ಉಡುಪಿ 05 ಪ್ರಕರಣ ಪತ್ತೆಯಾಗಿವೆ.

 

key words : bangalore-karnataka-covid.19-corona-1000-positive