ಬಹಳ ವೇಗವಾಗಿ ಕರ್ನಾಟಕದ ಮಧುಮೇಹ ರಾಜಧಾನಿಯಾಗಿ ಪರಿವರ್ತನೆಯಾಗುತ್ತಿರುವ ಬೆಂಗಳೂರು ಮಹಾನಗರ.

ಬೆಂಗಳೂರು, ಸೆಪ್ಟೆಂಬರ್  2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಬೆಂಗಳೂರು ಮಹಾನಗರ ಅತ್ಯಂತ ವೇಗವಾಗಿ ರಾಜ್ಯದ ಮಧುಮೇಹ ರಾಜಧಾನಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರದಲ್ಲಿರುವ ಒಟ್ಟು ಜನಸಂಖ್ಯೆಯ ಪೈಕಿ ಬರೋಬ್ಬರಿ ಶೇ.೫೦.೮೬ರಷ್ಟು ಜನಸಂಖ್ಯೆ ಮಧುಮೇಹಿಗಳಂತೆ. ವಾಸ್ತವದಲ್ಲಿ ಅನೇಕ ಮಧುಮೇಹಿಗಳು ಕೋವಿಡ್ ಮೊದಲ ಹಾಗೂ  ಎರಡನೆಯ ಅಲೆಯ ಸಂದರ್ಭದಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.

ಮನೆಮನೆ ಸಮೀಕ್ಷೆಯನ್ನು ಕೈಗೊಂಡಿರುವ ಬಿಬಿಎಂಪಿ ಈವರೆಗೆ ೨,೪೮,೨೮೦ ಮನೆಗಳನ್ನು ತಲುಪಿದ್ದು, ಕಳೆದ ೨೧ ದಿನಗಳಲ್ಲಿ ಒಟ್ಟು ೭,೧೧,೬೪೮ ಜನರನ್ನು ಸಂದರ್ಶಿಸಿದೆ. ಈ ಸಮೀಕ್ಷೆಯಲ್ಲಿ ೫೭,೫೨೮ ಜನರು ಸಹ ಖಾಯಿಲೆಗಳಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಈ ಪೈಕಿ ಶೇ.೩೫.೮೨ ರಷ್ಟು ಜನರು ಅಧಿಕ ರಕ್ತದೊತ್ತಡ (ಬಿಪಿ), ಶೇ.೨.೯೯ ರಷ್ಟು ಜನರು ಹೈಪೊಥೈರಾಯ್ಡಿಸಂ ಹಾಗೂ ಶೇ.೨.೪೮ ಜನರು ಇಸ್ಕೆಮಿಕ್ ಹಾರ್ಟ್ ಡಿಸೀಸ್ (ರಕ್ತಕೊರತೆಯ ಹೃದಯ ಖಾಯಿಲೆ)ನಿಂದ ಬಳಲುತ್ತಿರುವುದು ಪತ್ತೆಯಾಗಿದೆ.

ಸಂದರ್ಶಿಸಿರುವ ಒಟ್ಟು ಜನರ ಪೈಕಿ ೨೨,೩೧೩ ಜನರು ಕೋವಿಡ್ ಸೋಂಕಿಗೆ ಈಡಾಗಿದ್ದಾರೆ. ಆಸ್ಟರ್ ಆರ್‌ವಿ ಆಸ್ಪತ್ರೆಯ ಪೀಡಿಯಾಟ್ರಿಕ್ ಎಂಡೋಕ್ರೇನಾಲಜಿ ಮತ್ತು ಡಯಾಬಿಟಿಸ್ ವಿಭಾಗದ ಹಿರಿಯ ವೈದ್ಯೆ, ಡಾ. ಎನ್. ಕವಿತಾ ಭಟ್ ಅವರು ಹೀಗೆನ್ನುತ್ತಾರೆ, “ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮಕ್ಕಳಲ್ಲಿ ಟೈಪ್ 1 ಮಧುಮೇಹದ ಪ್ರಕರಣಗಳ ಸಂಖ್ಯೆ ಹೆಚ್ಚಳವಾಯಿತು. ಟೈಪ್ ೧ ಮಧುಮೇಹ ಸ್ವಯಂನಿರೋಧಕ ಸ್ಥಿತಿ (autoimmune), ಅಂದರೆ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ನಮ್ಮ ದೇಹದ ಜೀವಕೋಶಗಳ ಮೇಲೆ ದಾಳಿ ನಡೆಸುತ್ತವೆ. ಈ ರೀತಿಯ ಮಧುಮೇಹ ಖಾಯಿಲೆಯಲ್ಲಿ, ದೇಹದ ರೋಗನಿರೋಧಕ ವ್ಯವಸ್ಥೆ ದೇಹದ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳನ್ನು ನಾಶಪಡಿಸುತ್ತವೆ.”

ಕೋವಿಡ್-೧೯ ಒಳಗೊಂಡಂತೆ ಉಸಿರಾಟದ ಸೋಂಕುಗಳು ಪ್ಯಾನ್‌ ಕ್ರಿಯಾಸ್‌ ನ (ಮೇದೋಜ್ಜೀರಕ ಗ್ರಂಥಿ) ಇನ್ಸುಲಿನ್ ಉತ್ಪಾದಿಸುವ ಬಿಟಾ ಜೀವಕೋಶಗಳ ವಿರುದ್ಧ ರೋಗನಿರೋಧಕ ವ್ಯವಸ್ಥೆಯ ದಾಳಿಯನ್ನು ಪ್ರಚೋದಿಸುತ್ತದೆ. ಈ ಮೂಲಕ ಮಧುಮೇಹ ಸಂಭವಿಸುತ್ತದೆ. “ಸರ್ಸ್ಕ-ಕೋವಿಡ್-೨ ಪ್ರವೇಶಕ್ಕೆ ಆಂಜಿಯೊಟೆನ್ಸಿನ್ ಕನವರ್ಟಿಂಗ್ ಎನ್‌ ಜೈಮ್-೨ (ಎಸಿಇ-೨) ಗ್ರಾಹಿಯಾಗಿರುವುದನ್ನು (Receptor) ಪತ್ತೆ ಹಚ್ಚಲಾಗಿದೆ. ಈ ಮೇದೋಜ್ಜೀರಕ ಗ್ರಂಥಿಯಲ್ಲಿನ ಇನ್ಸುಲಿನ್-ಉತ್ಪಾದಿಸುವ ಜೀವಕೋಶಗಳಲ್ಲಿ ಎಸಿಇ-೨ನ ಸ್ಥಳೀಕರಣವು ಕೊರೋನಾ ವೈರಾಣು ಜೀವಕೋಶಗಳನ್ನು ಪ್ರವೇಶಿಸಲು ಅನುಮತಿಸಿ, ಅವುಗಳನ್ನು ನಾಶಪಡಿಸುತ್ತವೆ. ಜೊತೆಗೆ, ಕೋವಿಡ್ ಸೋಂಕಿರುವ ಸಂದರ್ಭದಲ್ಲಿ ರೋಗಪ್ರತಿರೋಧಕತೆಯ ಅನಿಯಂತ್ರಣವು ಮೇದೋಜ್ಜೀರಕ ಬೀಟಾ ಕೋಶಗಳ ವಿರುದ್ಧ ಸ್ವಯಂ ಪ್ರತಿಕಾಯಗಳು ಅಭಿವೃದ್ಧಿಯಾಗಲು ಕಾರಣವಾಗುತ್ತವೆ,” ಎಂದು ವಿವರಿಸಿದರು.

ಈ ಹಿಂದೆ ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ತಿಳಿಸಿದಂತೆ, ಹೃದಯ ಸಂಬಂಧಿತ ಖಾಯಿಲೆಗಳು, ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆ ಒಳಗೊಂಡಂತೆ ನಾನ್-ಕಮ್ಯೂನಿಕೆಬಲ್ ಖಾಯಿಲೆಗಳಿಂದ (ಎನ್‌ಸಿಡಿಗಳು) ಬಳಲುತ್ತಿರುವ ರೋಗಿಗಳ ನಿಖರವಾದ ದತ್ತಾಂಶ ಲಭ್ಯವಿಲ್ಲದಿದ್ದರೂ ಸಹ, ಈ ಖಾಯಿಲೆಗಳಿಂದ ಪೀಡಿತರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಅಧ್ಯಯನಗಳಿಂದ ಸಾಬೀತಾಗಿದೆ.

ಆಸ್ಟರ್ ಸಿಎಂಐ ಆಸ್ಪತ್ರೆಯ ಎಂಡೊಕ್ರೆನಾಲಜಿ ವಿಭಾಗದ ವೈದ್ಯ ಡಾ. ಮಹೇಶ್ ಡಿ.ಎಂ ಅವರು ವಿವರಿಸುವಂತೆ, “ನಗರೀಕರಣ, ಪೋಷಣೆಯ ಪರಿವರ್ತನೆ ಹಾಗೂ ಒಂದೇ ಕಡೆ ಕೂತು ಕೆಲಸ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಬೊಜ್ಜಿನ ಸಮಸ್ಯೆಯ ಹೆಚ್ಚಳಕ್ಕೆ ಕಾರಣವಾಗಿವೆ. ಇವು ಏಷ್ಯಾ ಖಂಡದ ರಾಷ್ಟ್ರಗಳಲ್ಲಿ ಸಾಂಕ್ರಾಮಿಕವಾಗಿ ಬದಲಾಗುತ್ತಿವೆ. ಜೊತೆಗೆ ಕಕೇಶಿಯನ್ನರ ಹೋಲಿಕೆಯಲ್ಲಿ ಏಷ್ಯಾದ ಜನರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಹಾಗೂ ಕಡಿಮೆ ಬಿಎಂಐ ಮಟ್ಟದಂತಹ ಸಮಸ್ಯೆಗಳಿಂದ ಪೀಡಿತರಾಗುತ್ತಿದ್ದಾರೆ.” ಮಧುಮಹೇಹದ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಹೆಚ್ಚುತ್ತಿರುವ ಧೂಮಪಾನ ಮತ್ತು ಮದ್ಯಪಾನ ಹವ್ಯಾಸಗಳೂ ಕಾರಣವಾಗಿವೆ; ಜೊತೆಗೆ ಆಹಾರದಲ್ಲಿ ಹೆಚ್ಚು ಅನ್ನ ಬಳಕೆ ಹಾಗೂ ದೈಹಿಕ ಚಟುವಟಿಕೆಯ ಕೊರತೆಗಳು ಇದಕ್ಕೆ ಸೇರಿಕೊಂಡಿವೆ. “ಬಾಲ್ಯದಲ್ಲಿ ಕಳಪೆ ಪೌಷ್ಟಿಕತೆಯ ಜೊತೆಗೆ ನಂತರದ ಜೀವನದಲ್ಲಿ ಅಧಿಕ ಪೌಷ್ಟಿಕತೆ ಅಭ್ಯಾಸವೂ ಸಹ ಈ ಸಮಸ್ಯೆಯಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತವೆ. ಈ ಪೌಷ್ಟಿಕತೆ ಪರಿವರ್ತನೆಗೆ, ಪಾಶ್ಚಿಮಾತ್ಯ ಆಹಾರ ಸೇವನಾ ಪದ್ಧತಿ ಹಾಗೂ ಜೀವನಶೈಲಿ ಮತ್ತು ಅನುವಂಶಿಕ ಹಿನ್ನೆಲೆಯ ನಡುವಿನ ಪರಸ್ಪರ ಕ್ರಿಯೆಗಳು ಕಾರಣವಾಗಿದ್ದು ಮಧುಮೇಹದ ಸಂಭವವನ್ನು ಹೆಚ್ಚಿಸುತ್ತಿದೆ,” ಎನ್ನುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ಒಂದು ವರದಿಯ ಪ್ರಕಾರ ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ಎನ್‌ಸಿಡಿಗಳ ಕಾರಣದಿಂದಾಗಿಯೇ ಸುಮಾರು ೪೧ ದಶಲಕ್ಷ ಪ್ರಾಣಹಾನಿ ಉಂಟಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಎನ್‌ಸಿಡಿಗಳಿಂದ ಸುಮಾರು ೫.೮ ದಶಲಕ್ಷ ಜನರು ಪ್ರಾಣ (ಡಬ್ಲೂö್ಯಹೆಚ್‌ಒ ವರದಿ, ೨೦೧೫) ಕಳೆದುಕೊಳ್ಳುತ್ತಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Bangalore – fast- becoming –diabetic- capital – Karnataka