ಬೆಂಗಳೂರಿನಲ್ಲಿ ೧೭೨ ಅನಧಿಕೃತ ಬಡಾವಣೆಗಳಿವೆ, ಆದರೆ ಕ್ರಮ ಕೈಗೊಳ್ಳುವಲ್ಲಿ ಬಿಡಿಎ ವಿಫಲವಾಗಿದೆ

 

ಬೆಂಗಳೂರು, ಜುಲೈ ೨೭, ೨೦೨೧ (www.justkannada.in): ರಾಜ್ಯದಲಿ ಬಿಡಿಎ ಹಾಗೂ ರೆರಾ (ಆರ್‌ಇಆರ್‌ಎ) ದಂತಹ ಸರ್ಕರಿ ಅಂಗಗಳಿರುವ ಹೊರತಾಗಿಯೂ ಬೆಂಗಳೂರು ನಗರದಲ್ಲಿ ೧೭೨ ಅನಧಿಕೃತ ಬಡಾವಣೆಗಳಿದ್ದು, ಜನರನ್ನು ವಂಚಿಸಿ ಹಣ ಲೂಟಿ ಮಾಡುವ ಕೆಲಸ ಸಮೃದ್ಧಿಯಾಗಿ ಮುಂದುವರೆದಿದೆ!

ಇಲ್ಲಿ ನಿಯಂತ್ರಕ ಪ್ರಾಧಿಕಾರಗಳ ಕೊರತೆ ಇಲ್ಲ. ಆದರೆ ನಗರದಲ್ಲಿ ಅನಧಿಕೃತ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿದ್ದು, ನಿವೇಶನ ಖರೀದಿಸಲು ಬಯಸುವ ಜನರನ್ನು ಗಂಡಾಂತರಕ್ಕೆ ತಳುತ್ತಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರಕಾರ ನಗರದಲ್ಲಿ ೧೭೨ ಅನಧಿಕೃತ ಬಡಾವಣೆಗಳಿವೆ. ಆದರೆ ಈ ರೀತಿ ಅನುಮತಿ ಇಲ್ಲದೆ ಬಡಾವಣೆಗಳನ್ನು ನಿರ್ಮಿಸಿರುವ ಯಾರನ್ನೂ ಸಹ ಶಿಕ್ಷಿಸಲು ಬಿಡಿಎಗೆ ಸಾಧ್ಯವಾಗಿಲ್ಲ! ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಅಥಾರಿಟಿ ಕರ್ನಾಟಕ (ಆರ್‌ಎಆರ್‌ಎ-ರೆರಾ) ವನ್ನು ಇಂತಹ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ನಿಯಂತ್ರಿಸಲೆಂದೇ ಸ್ಥಾಪಿಸಲಾಗಿದೆ. ಆದರೆ, ಬೆಂಗಳೂರು ನಗರದಲ್ಲಿರುವ ಅನಧಿಕೃತ/ಕಾನೂನುಬಾಹಿರ ಬಡಾವಣೆಗಳ ಸಂಖ್ಯೆಯನ್ನು ನೋಡಿದಾಗ ರೆರಾ ತಪ್ಪಿತಸ್ಥರ ವಿರುದ್ಧ ಇನ್ನೂ ಕ್ರಮ ಕೈಗೊಳ್ಳಬೇಕಿದೆ!

jk

ಫೋರಂ ಫಾರ್ ಪೀಪಲ್ಸ್ ಕಲೆಕ್ಟಿವ್ ಎಫರ್ಟ್ಸ್ನ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶಂಕರ್ ಅವರು ಹೇಳುವಂತೆ, “ರೆರಾ ಕರ್ನಾಟಕ, ಕಾನೂನಬಾಹಿರ ಬಡಾವಣೆಗಳ ಮೇಲೆ ನಿಗಾವಹಿಸಬೇಕು. ಆದರೆ ಈ ಕುರಿತು ಅವರ ಗಮನಕ್ಕೆ ತಂದರೂ ಸಹ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅನೇಕ ಭೂಅಭಿವೃದ್ಧಿ ಸಂಸ್ಥೆಗಳು ಪತ್ರಿಕೆಗಳಲ್ಲಿ ಪ್ರತಿ ವಾರಾಂತ್ಯದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಬಡಾವಣೆಗಳಲ್ಲಿ ನಿವೇಶನಗಳ ಮಾರಾಟದ ಕುರಿತು ಧೈರ್ಯವಾಗಿ ಜಾಹಿರಾತುಗಳನ್ನು ನೀಡುತ್ತಿದ್ದಾರೆ. ಇಂತಹ ಕಾನೂನುಬಾಹಿರ ಬಡಾವಣೆಗಳ ವಿರುದ್ಧ ರೆರಾ ಕರ್ನಾಟಕ ಕಾನೂನು ಕ್ರಮ ಜರುಗಿಸಬೇಕು.”

ಬಿಡಿಎ ದತ್ತಾಂಶದ ಪ್ರಕಾರ ೨೦೦೮ರಲ್ಲಿ ೧೨೭ರಷ್ಟಿದ್ದ ಅನಧಿಕೃತ ಬಡಾವಣೆಗಳ ಸಂಖ್ಯೆ ೨೦೨೧ರ ವೇಳೆಗೆ ೧೭೨ಕ್ಕೆ ಏರಿದೆ. ಭೂಮಿ ಅಭಿವೃದ್ಧಿ (ಲ್ಯಾಂಡ್ ಡೆವೆಲರ್ಸ್ಷ) ಪಡಿಸುವವರು ಬಿಡಿಎ ವತಿಯಿಂದ ತಮ್ಮ ಬಡಾವಣೆಗೆ ಅನುಮೋದನೆ ಪಡೆಯಬೇಕಾದರೆ ಬೆಟೆರ್‌ಮೆಂಟ್ ಶುಲ್ಕವಾಗಿ ಲಕ್ಷಾಂತರ ರೂಪಾಯಿಗಳನ್ನು ನೀಡಬೇಕಾಗುತ್ತದೆ ಮತ್ತು ಸಿವಿಕ್ ಅಮೆನಿಟಿ (ಸಿಎ) ಸೈಟುಗಳನ್ನು ಒಪ್ಪಿಸಬೇಕಾಗುತ್ತದೆ. ಹಾಗಾಗಿ ಈ ಬೆಟೆರ್‌ಮೆಂಟ್ ಶುಲ್ಕಗಳನ್ನು ನೀಡುವುದು ಹಾಗೂ ಸಿಎ ಸೈಟುಗಳನ್ನು ಒಪ್ಪಿಸುವುದರಿಂದ ತಪ್ಪಿಸಿಕೊಳ್ಳಲು ಬಹುಪಾಲು ಲ್ಯಾಂಡ್ ಡೆವೆಲಪರ್‌ಗಳು ಬಿಡಿಎ ವತಿಯಿಂದ ಅನುಮೋದನೆಯನ್ನು ಪಡೆಯುವುದೇ ಇಲ್ಲ. ಬದಲಿಗೆ ನಿಯಂತ್ರಕ ಪ್ರಾಧಿಕಾರಗಳಿಂದ ಅನುಮೋದನೆ ಪಡೆದಿರುವುದಾಗಿ ಜಾಹಿರಾತುಗಳನ್ನು ನೀಡುತ್ತಾರೆ. ಕೆಲವು ಪ್ರಕರಣಗಳಲ್ಲಿ ಈ ರೀತಿಯ ಅನಧಿಕೃತ ಬಡಾವಣೆಗಳಿಗೆ ಬೆಸ್ಕಾಂ, ಬಿಡ್ಲೂಎಸ್‌ಎಸ್‌ಬಿ ವಿದ್ಯುತ್, ನೀರು ಸರಬರಾಜು ಹಾಗೂ ಒಳಚರಂಡಿ ಸೌಲಭ್ಯಗಳನ್ನು ಒದಗಿಸುತ್ತವೆ!

“ಬೆಸ್ಕಾಂ ಮತ್ತು ಬಿಡ್ಲುಸ್‌ಎಸ್‌ಬಿಗಳು ಇಂತಹ ಅನಧಿಕೃತ ಬಡಾವಣೆಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜನ್ನು ಒದಗಿಸುವಂತಿಲ್ಲ. ಬಹುಪಾಲು ನಾಗರಿಕರಿಗೆ ಅನಧಿಕೃತ ಬಡಾವಣೆಗಳಲ್ಲಿ ಸಿವಿಕ್ ಅಮೆನಿಟಿ (ಸಿಎ) ನಿವೇಶನಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಈ ರೀತಿ ಸಿಎ ನಿವೇಶನಗಳನ್ನು ಲ್ಯಾಂಡ್ ಡೆವೆಲಪರ್‌ಗಳು ಮಾಡುವಂತಿಲ್ಲ,” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರಾದ ಸಾಯಿ ದತ್ತಾ ಅವರು.
ಅವರ ಪ್ರಕಾರ ಬಿಡಿಎ ಅನಧಿಕೃತ ಬಡವಾಣೆಗಳನ್ನು ನಿರ್ಮಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. “ಇಂತಹ ಕಾನೂನುಬಾಹಿರ ಬಡಾವಣೆಗಳನ್ನು ನಿರ್ಮಿಸುವವರನ್ನು ಶಿಕ್ಷಿಸಬೇಕು, ತಮ್ಮ ಜೀವಮಾನದ ಇಡೀ ಉಳಿತಾಯದ ಹಣವನ್ನು ಖರ್ಚು ಮಾಡಿ ನಿವೇಶನಗಳನ್ನು ಖರೀದಿಸಿ ಮೋಸ ಹೋಗುವ ಅಮಾಯಕ ಜರನಲ್ಲ,” ಎನ್ನುವುದು ಅವರ ವಾದ.

no-proposals-abandon-creation-bda-clarified

“ಕೆಲವೊಮ್ಮೆ ಲ್ಯಾಂಡ್ ಡೆವೆಲಪರ್‌ಗಳು ಅಭಿವೃದ್ಧಿಪಡಿಸಿರುವ ಬಡಾವಣೆಯ ಪೈಕಿ ಕೆಲವು ಎಕರೆ ಭೂಮಿಗೆ ಮಾತ್ರ ಅನುಮೋದನೆಯನ್ನು ಪಡೆದುಕೊಂಡಿರುತ್ತಾರೆ ಮತ್ತು ಅದನ್ನೇ ಉಳಿದ ಭೂಮಿಗೂ ಉಪಯೋಗಿಸಿಕೊಳ್ಳುತ್ತಾರೆ. ಉದಾಹರಣೇಗೆ, ಓರ್ವ ಲ್ಯಾಂಡ್ ಡೆವೆಲಪರ್ ಬಳಿ ೫೦ ಎಕರೆ ಭೂಮಿ ಇದ್ದರೆ, ಆತ ೩೦ ಎಕರೆಗೆ ಮಾತ್ರ ಅನುಮೋದನೆ ಪಡೆದುಕೊಂಡು ಉಳಿದ ೨೦ ಎಕರೆಗೂ ಅದನ್ನೇ ಬಳಸಿಕೊಳ್ಳುತ್ತಾನೆ,” ಎನ್ನುವುದು ರೆರಾ ಕಾರ್ಯರ್ತರ ಅಭಿಪ್ರಾಯ.

ಈ ನಡುವೆ, ಬಿಡಿಎ ಆಯುಕ್ತ ರಾಜೇಶ್ ಗೌಡ ಎಂ.ಬಿ. ಅವರು ಈ ಕುರಿತು ಮಾತನಾಡಿ, “ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳನ್ನು ನೋಂದಣಿ ಮಾಡದಿರುವಂತೆ ಸಂಬಂಧಪಟ್ಟ ಉಪನೋಂದಣಾಧಿಕಾರಿಗಳಿಗೆ ನಾವು ಈಗಾಗಲೇ ತಿಳಿಸಿದ್ದೇವೆ. ಖರೀದಿದಾರರು ಹಾಗೂ ಅನಧಿಕೃತ ಬಡಾವಣೆಗಳ ನಡುವೆ ಸೇಲ್ ಡೀಡ್‌ಗಳನ್ನು ಅನಮತಿಸದಿರುವಂತೆಯೂ ಸಲಹೆ ನೀಡಿದ್ದೇವೆ,” ಎನ್ನುತ್ತಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

 

key words : bangalore-development-authority-BDA-land