ಗೃಹ ಪ್ರವೇಶಕ್ಕೆ ಕರೆಯುವ ನೆಪದಲ್ಲಿ ದಂಪತಿಗೆ ವಂಚಿಸಿದ್ದ ಆರೋಪಿ ಅಂದರ್…

ಬೆಂಗಳೂರು, ಅಕ್ಟೋಬರ್,18,2020(www.justkannada.in): ನಾನು ನಿಮ್ಮ ಎದುರುಗಡೆ ಮನೆ ನಿವಾಸಿ ಎಂದು ಹೇಳಿ ಗೃಹಪ್ರವೇಶಕ್ಕೆ ಕರೆಯುವ ನೆಪದಲ್ಲಿ ವೃದ್ಧ ದಂಪತಿಗೆ ವಂಚಿಸಿದ್ದ ಆರೋಪಿಯನ್ನು ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಅಕ್ಷಯ್ ಬಂಧಿತ ಆರೋಪಿ. ಬಂಧಿತ ಆರೋಪಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ವೃದ್ಧ ದಂಪತಿ ಬಳಿ 24 ಗ್ರಾಂ ಚಿನ್ನದ ಸರವನ್ನು ದೋಚಿದ್ದ. ಅಕ್ಟೋಬರ್ 1 ರಂದು ಸೀತಾಪತಿ ಮನೆಗೆ ಹೋಗಿದ್ದ ಅಕ್ಷಯ್ ನಾನು ನಿಮ್ಮ ಮನೆಯ ಎದುರುಗಡೆ ನಿವಾಸಿ ಎಂದು ತಿಳಿಸಿದ್ದಾನೆ. ನಮ್ಮ ಮನೆಯ ಗೃಹಪ್ರವೇಶವಿದೆ. ಬನ್ನಿ ಎಂದು ಆಹ್ವಾನ ನೀಡಿದ್ದಾನೆ.bangalore-accused-cheating-couple-invitation

ಇದೇ ವೇಳೆ ವೃದ್ಧ ದಂಪತಿಗೆ ಬೆಳ್ಳಿ ಮಾದರಿಯ ಕಾಯಿನ್ ಕೊಟ್ಟ ಆರೋಪಿ ಅಕ್ಷಯ್ ಚಿನ್ನದ ಸರಕ್ಕೆ ಚಿನ್ನದ ಡಾಲರ್ ನೀಡುವುದಾಗಿ ಹೇಳಿ ವೃದ್ಧ ದಂಪತಿ ಬಳಿಯಿಂದ 24 ಗ್ರಾಂ ಚಿನ್ನದ ಸರವನ್ನ ಪಡೆದುಕೊಂಡಿದ್ದಾನೆ. ಇದೇ ವೇಳೆ ಗ್ಯಾಸ್ ಸಿಲಿಂಡರ್ ವ್ಯಕ್ತಿ ಮನೆಗೆ ಬಂದಿದ್ದು, ಆತನಿಗೆ ಹಣ ಕೊಡಲು ದಂಪತಿಗೆ ಹೊರಗೆ ಹೋಗುತ್ತಿದ್ದಂತೆ ಅಕ್ಷಯ್ ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇದೀಗ ಸಿಸಿ ಟಿವಿ ಆಧರಿಸಿ ಆರೋಪಿ ಅಕ್ಷಯ್ ನನ್ನು ಸುಬ್ರಮಣ್ಯಪುರ ಠಾಣಾ ಪೊಲೀಸರು ಬಂಧಿಸಿ ಸರ ಜಪ್ತಿ ಮಾಡಿದ್ದಾರೆ.

Key words: Bangalore- accused – cheating- couple – invitation