GBA ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧಾರ: MLC ಸಿ.ಟಿ ರವಿ ಟೀಕೆ

ಬೆಂಗಳೂರು,ಜನವರಿ,20,2026 (www.justkannada.in):  ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ನಾಯಕರ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ, ವಿಧಾನಸಭೆ ಚುನಾವಣೆಯಲ್ಲಿ ಇವಿಎಂನಲ್ಲಿ ಹೇಗೆ 135 ಸ್ಥಾನ ಪಡೆದಿರಿ ಎಂದು ಪ್ರಶ್ನಿಸಿದರು.  ತಾಂತ್ರಿಕತೆ ಕಡೆಗೆ ಹೋಗೋದು ಒಳ್ಳೆಯ ಬೆಳವಣಿಗೆ . ಜಿಬಿಎ ಫಲಿತಾಂಶ ಬದಲಾಯಿಸಬಹುದು. ಜನಾಭಿಪ್ರಾಯದ ವಿರುದ್ದವಾಗಿ ಬದಲಾಯಿಸಬಹುದು. ಹೀಗಾಗಿ ಬ್ಯಾಲೆಟ್ ಪೇಪರ್ ಬಳಕೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಇವಿಎಂ ತಂದಿದ್ದೇ ಕಾಂಗ್ರೆಸ್.  ಈಗ  ಅವರಿಗೆ ನಂಬಿಕೆ ಇಲ್ಲ.  ಬ್ಯಾಲೆಟ್ ಪೇಪರ್ ನಾದರೂ ತರಲಿ. ಇವಿಎಂನಾದರೂ ತರಲಿ ಜಿಬಿಎ ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿ. ಇದು ಕಾಂಗ್ರೆಸ್ ನ ಕುತಂತ್ರ ಎಂದರು.

Key words: Decision, ballot papers, GBA elections, MLC, CT Ravi, criticizes