ಬಳ್ಳಾರಿ ಬ್ಯಾನರ್ ಗಲಾಟೆ: ಮೃತ ‘ಕೈ’ ಕಾರ್ಯಕರ್ತ ರಾಜಶೇಖರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದ ಬಿಜೆಪಿ

ಬಳ್ಳಾರಿ,ಜನವರಿ,17,2026 (www.justkannada.in):  ಬಳ್ಳಾರಿಯಲ್ಲಿ ಬ್ಯಾನರ್  ಕಟ್ಟುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸಾವನ್ನಪ್ಪಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಕುಟುಂಬಕ್ಕೆ ಬಿಜೆಪಿ 10 ಲಕ್ಷ ರೂ. ಪರಿಹಾರ ನೀಡಿದೆ.

ಬಳ್ಳಾರಿಯಲಿರುವ ರಾಜಶೇಖರ ರೆಡ್ಡಿ ನಿವಾಸಕ್ಕೆ  ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, , ಶಾಸಕ ಜನಾರ್ದನ ರೆಡ್ಡಿ ಮಾಜಿ ಸಚಿವ ಬಿ ಶ್ರೀರಾಮುಲು ಸೇರಿದಂತೆ ಬಿಜೆಪಿ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ  ರಾಜಶೇಖರ ರೆಡ್ಡಿ ಅವರ ತಾಯಿ ಅವರಿಗೆ ಹತ್ತು ಲಕ್ಷ ರೂ.ಚೆಕ್ ಅನ್ನು ಹಸ್ತಾಂತರಿಸಿದರು.

ಇತ್ತೀಚಿಗೆ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ನೇತೃತ್ವದ ಕಾಂಗ್ರೆಸ್ ನಿಯೋಗ 25 ಲಕ್ಷ ರೂ ಪರಿಹಾರವನ್ನು ಕೆಪಿಸಿಸಿ ವತಿಯಿಂದ ನೀಡಿತ್ತು.

ಬಳಿಕ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು,   ಮೃತ ರಾಜಶೇಖರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇವೆ. ಕುಟುಂಬ ಸದಸ್ಯರಿಗೆ 10 ಲಕ್ಷ ರೂ. ಚೆಕ್ ಪರಿಹಾರ ನೀಡಿದ್ದೇವೆ. ರಾಜಶೇಖರ್ ರೆಡ್ಡಿ ಸಾವಿನ ಬಗ್ಗೆ ನಮಗೆ ಗೊಂದಲವಿತ್ತು.  ಬಿಜೆಪಿಯವರು ಕೊಂದಿದ್ದಾರೆಂದು ಯಾಮಾರಿಸುವ ಪ್ರಯತ್ನ ನಡೆದಿತ್ತು ಅಮೇಲೆ ಕಾಂಗ್ರೆಸ್ ನಿಂದಲೇ ಕೊಲೆ ಆಗಿರೋದು ಎಂದು ಗೊತ್ತಾಗಿದೆ. ಈ ಬಗ್ಗೆ ರಾಜಶೇಖರ್ ತಾಯಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ.   ನಮ್ಮಿಂದ ಯಾವುದೇ ತಪ್ಪು ಆಗಿಲ್ಲ ಎಂದರು.

Key words: Ballari riot, BJP, Rs 10 lakh, compensation, Rajashekar, Family