ಹ್ಯಾಟ್ರಿಕ್ ಹೀರೋ ಶಿವಣ್ಣ ‘ಭಜರಂಗಿ-2’ ಮುಹೂರ್ತ !

ಬೆಂಗಳೂರು, ಜೂನ್ 21, 2019 (www.justkannada.in): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಜರಂಗಿ 2 ಸಿನಿಮಾ ಮುಹೂರ್ತ ನೆರವೇರಿದೆ.

ಬೆಂಗಳೂರಿನ ದೇವಾಲಯವೊಂದರಲ್ಲಿ ಮುಹೂರ್ತ ಸಮಾರಂಭ ನಡೆದಿದೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಅವರೇ ಕ್ಲಾಪ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಹರ್ಷ ಸೇರಿದಂತೆ ಚಿತ್ರತಂಡ ಜತೆಗಿತ್ತು.

ಶಿವಣ್ಣ ಅಭಿನಯದ ರುಸ್ತುಂ ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಗ್ಗೆ ಈಗಾಗಲೇ ಅಭಿಮಾನಿಗಳ ಕುತೂಹಲ ಮೂಡಿದೆ. ಅದರ ಮಧ್ಯೆಯೇ ಸೆಂಚುರಿ ಸ್ಟಾರ್ ನ ಮತ್ತೊಂದು ಸಿನಿಮಾ ಸೆಟ್ಟೇರಿದೆ.