ಜಾಮೀನು ರಹಿತ ವಾರೆಂಟ್: ಕೊರಿಯೋಗ್ರಾಫರ್ ರೆಮೊ ಡಿಸೋಜಾಗೆ ಸಂಕಷ್ಟ

ಬೆಂಗಳೂರು, ಅಕ್ಟೋಬರ್ 25, 2019 (www.justkannada.in): ವಂಚನೆ ಆರೋಪ ಎದುರಿಸುತ್ತಿರುವ ಕೊರಿಯೋಗ್ರಾಫರ್ ರೆಮೊ ಡಿಸೋಜಾಗೆ ಗಾಜಿಯಾಬಾದ್ ಹೈಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಹೊರರಾಜ್ಯದ ಪ್ರಕರಣವಾದ್ದರಿಂದ ಮುಂಬೈ ಪೊಲೀಸರ ಅನುಮತಿ ಸಿಕ್ಕ ಬಳಿಕ ವಾರಂಟ್ ನೀಡಲಾಗುತ್ತದೆ.

‘ಅಮರ್ ಮಸ್ಟ್ ಡೈ’ ಸಿನಿಮಾಗಾಗಿ 5 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ರೆಮೊ ವಿರುದ್ಧ ಗಾಜಿಯಾಬಾದ್‌ನ ಸತ್ಯೇಂದ್ರ ತ್ಯಾಗಿ 2016ರಲ್ಲಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಆಗಿದೆ.