ಜಾಮೀನು ರದ್ದು ಹಿನ್ನೆಲೆ: ಇಂದು ಸಂಜೆ ನಟ ದರ್ಶನ್ ಪೊಲೀಸರಿಗೆ ಶರಣು

ಬೆಂಗಳೂರು,ಆಗಸ್ಟ್,14,2025 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ , ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ್ದು ಈ ಹಿನ್ನೆಲೆಯಲ್ಲಿ ಆರೋಪಿಗಳನ್ನ ಬಂಧಿಸಲು ಪೊಲೀಸರು ಸಿದ್ದತೆ ನಡೆಸುತ್ತಿದ್ದಾರೆ.

ಈ ನಡುವೆ ನಟ ದರ್ಶನ್ ಸಂಜೆ 4.30ರ ವೇಳೆಗೆ ಪೊಲೀಸರಿಗೆ ಶರಣಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ತಮಿಳುನಾಡಿಗೆ ಹೋಗಿರುವ ನಟ ದರ್ಶನ್  ಮಹದೇಶ್ವರ ಬೆಟ್ಟದ ಬಳಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಬೆಂಗಳೂರಿತ್ತ ಬರುತ್ತಿರುವ ದರ್ಶನ್ ಸಂಜೆ ಪೊಲೀಸರ ಬಳಿ ಶರಣಾಗಲಿದ್ದಾರೆ ಎನ್ನಲಾಗಿದೆ.

ಇತ್ತ ಆರೋಪಿ 1 ಪವಿತ್ರಾಗೌಡ ಮನೆಗೆ ಪೊಲೀಸರು  ಆಗಮಿಸಿದ್ದು ಬಂಧಿಸುವ ಸಾಧ್ಯತೆ ಇದೆ. ಈ ನಡುವೆ ನಟ ದರ್ಶನ್ ಗೆ ಶರಣಾಗಲು ಅವಕಾಶವಿದ್ದು ಶರಣಾಗಲಿಲ್ಲವಾದರೇ ಪೊಲೀಸರ ಬಂಧಿಸಲಿದ್ದಾರೆ.  ಬಳಿಕ ಕೋರ್ಟ್ ಗೆ ಹಾಜರುಪಡಿಸಲಿದ್ದು ನಟ ದರ್ಶನ್ ಮತ್ತೆ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಶಿಫ್ಟ್ ಆಗುವ ಸಾಧ್ಯತೆ ಇದೆ.

Key words:  bail cancel,  Actor, Darshan, surrenders , police , evening