ಕವಟಗಿ ನಡುಗಡ್ಡೆಯಲ್ಲಿ ಸಿಲುಕಿದ್ದ ಬಾಣಂತಿ ಮತ್ತು  ಎರಡು ತಿಂಗಳ ಮಗುವಿನ ರಕ್ಷಣೆ…

ಬಾಗಲಕೋಟೆ,ಆ,8,2019(www.justkannada.in):  ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಈ ನಡುವೆ ಬಾಗಲಕೋಟೆಯ ಕವಟಗಿ  ನಡುಗಡ್ಡೆಯಲ್ಲಿ ಸಿಲುಕಿದ್ದ ಬಾಣಂತಿ ಮತ್ತ ಎರಡು ತಿಂಗಳ ಮಗುವನ್ನ ರಕ್ಷಣೆ ಮಾಡಲಾಗಿದೆ.

ನಿರಂತರ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ನೀರಿನಿಂದ ಜಲಾವೃತವಾಗಿದ್ದ  ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕವಟಗಿ ನಡುಗಡ್ಡೆಯಲ್ಲಿ ಸಿಲುಕಿದ್ದ ಜನರು ಹಾಗೂ ಜಾನುವಾರುಗಳನ್ನ ರಕ್ಷಣಾ ತಂಡ ರಕ್ಷಣೆ ಮಾಡಿದೆ.

ನಡುಗಡ್ಡೆಯಲ್ಲಿ ಸಿಲುಕಿದ್ದ ಎರಡು ತಿಂಗಳ ಮಗು ಹಾಗೂ  ಬಾಣಂತಿ ದೀಪಾ ಸಿದ್ಧಾಪುರ ಸೇರಿದಂತೆ 81ಜನರು ಮತ್ತು 70ಕ್ಕೂ ಹೆಚ್ಚು ಜಾನುವಾರುಗಳನ್ನ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ. ಇನ್ನು ಇದೇ ವೇಳೆ ರಕ್ಷಣಾ ತಂಡದ ಕಾರ್ಯಾಚರಣೆಗೆ ಶಾಸಕ ಆನಂದ್ ನ್ಯಾಮಗೌಡ ಸಾಥ್ ನೀಡಿದರು. ಇನ್ನು ಬೆಳಗಾವಿ ಜಿಲ್ಲೆ ಸೇರಿ ಹಲವೆಡೆ ಪ್ರವಾಹದಲ್ಲಿ ಸಿಲುಕಿರುವ ಜನರನ್ನ ರಕ್ಷಿಸುವ ಕಾರ್ಯದಲ್ಲಿ ಎನ್ ಡಿಆರ್ ಎಫ್ ತಂಡ , ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ನಿರತರಾಗಿದ್ದಾರೆ.

Key words: bagalakote- Heavy rain-protect-women- child