ಇಂದಿನಿಂದ ಬದ್ರಿನಾಥ್ ಯಾತ್ರೆ ಆರಂಭ

ಬೆಂಗಳೂರು, ಮೇ 08, 2022 (www.justkannada.in): ಸರ್ಕಾರ ಬದ್ರಿನಾಥ್ ಯಾತ್ರೆಗೆ ಒಪ್ಪಿಗೆ ನೀಡಿದ್ದು, ಇಂದಿನಿಂದ ಯಾತ್ರೆ ಆರಂಭವಾಗಲಿದೆ.

ಪ್ರತಿದಿನ 15 ಸಾವಿರ ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ವಾರ್ಷಿಕ ಚಾರ್‌ಧಾಮ್ ಯಾತ್ರೆಗೆ ಮೇ 3ರಂದು ಉತ್ತರಾಖಂಡ ಸರ್ಕಾರ ಚಾಲನೆ ನೀಡಿದೆ.

ಬದ್ರಿನಾಥ್ ದೇವಾಲಯವನ್ನು ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.  ಪೊಲೀಸರು, ಅಧಿಕಾರಿಗಳು ಬದ್ರನಾಥ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಚಾಮೋಲಿ ಜಿಲ್ಲೆಯ ಅಲಕಾನಂದ ನದಿಯ ದಂಡೆಯಲ್ಲಿರುವ ಬದ್ರಿನಾಥ ದೇವಾಲಯದಲ್ಲಿ ಶ್ರೀ ವಿಷ್ಣುವಿನ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸುತ್ತಾರೆ.